ADVERTISEMENT

ಐಸಿಸಿ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ಆರೋಪ: ಸ್ಟುವರ್ಟ್‌ ಲಾ ಅಮಾನತು

ರಾಯಿಟರ್ಸ್
Published 16 ಅಕ್ಟೋಬರ್ 2018, 12:39 IST
Last Updated 16 ಅಕ್ಟೋಬರ್ 2018, 12:39 IST
ಸ್ಟುವರ್ಟ್ ಲಾ
ಸ್ಟುವರ್ಟ್ ಲಾ   

ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣ ವೆಸ್ಟ್‌ ಇಂಡೀಸ್‌ ತಂಡದ ಮುಖ್ಯ ಕೋಚ್‌ ಸ್ಟುವರ್ಟ್‌ ಲಾ ಅವರನ್ನು ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ಅಮಾನತು ಶಿಕ್ಷೆ ತಕ್ಷಣದಿಂದಲೇ ಜಾರಿಯಾಗಿರುವ ಕಾರಣ ಸ್ಟುವರ್ಟ್‌, ಭಾರತದ ಎದುರಿನ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಜೊತೆ ಇರುವಂತಿಲ್ಲ.

ಹೈದರಾಬಾದ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ (ಭಾನುವಾರ) ವೇಳೆ ವಿಂಡೀಸ್‌ ತಂಡದ ಕೀರನ್‌ ಪೋವೆಲ್‌ ಔಟಾಗಿದ್ದರು. ಈ ವೇಳೆ ಟಿ.ವಿ.ಅಂಪೈರ್‌ ಕೊಠಡಿಗೆ ತೆರಳಿದ್ದ ಸ್ಟುವರ್ಟ್‌, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ನಾಲ್ಕನೇ ಅಂಪೈರ್‌ ಇರುವ ಜಾಗಕ್ಕೆ ತೆರಳಿ ಅವರ ವಿರುದ್ಧವೂ ಹರಿಹಾಯ್ದಿದ್ದರು. ಹೀಗಾಗಿ ಪಂದ್ಯದ ರೆಫರಿ ಕ್ರಿಸ್‌ ಬ್ರಾಡ್‌, ಸ್ಟುವರ್ಟ್‌ಗೆ ದಂಡವನ್ನೂ ವಿಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.