ADVERTISEMENT

ಟೆಸ್ಟ್ ಕ್ರಿಕೆಟ್‌: ಡೇಲ್ ಸ್ಟೇಯ್ನ್‌ಗೆ ದಾಖಲೆ ವಿಕೆಟ್‌

ಏಜೆನ್ಸೀಸ್
Published 26 ಡಿಸೆಂಬರ್ 2018, 17:05 IST
Last Updated 26 ಡಿಸೆಂಬರ್ 2018, 17:05 IST
ಪಾಕಿಸ್ತಾನದ ಫಕ್ರ್‌ ಜಮಾನ್ ವಿಕೆಟ್ ಕಬಳಿಸಿದ ಡೇಲ್ ಸ್ಟೇನ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಎಎಫ್‌ಪಿ ಚಿತ್ರ
ಪಾಕಿಸ್ತಾನದ ಫಕ್ರ್‌ ಜಮಾನ್ ವಿಕೆಟ್ ಕಬಳಿಸಿದ ಡೇಲ್ ಸ್ಟೇನ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಎಎಫ್‌ಪಿ ಚಿತ್ರ   

ಸೆಂಚೂರಿಯನ್‌: ವೇಗದ ಬೌಲರ್‌ ಡೇಲ್ ಸ್ಟೇಯ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರ ಎನಿಸಿಕೊಂಡರು. ಇಲ್ಲಿನ ಸೂಪರ್‌ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಬುಧವಾರ ಆರಂಭಗೊಂಡ ಪಾಕಿಸ್ತಾನ ಎದುರಿನ ಮೊದಲ ಪಂದ್ಯದಲ್ಲಿ ಫಕ್ರ್‌ ಜಮಾನ್ ವಿಕೆಟ್ ಕಬಳಿಸುವುದರೊಂದಿಗೆ ಅವರು ಈ ಸಾಧನೆ ಮಾಡಿದರು. ಇದು ಸ್ಟೇನ್ ಅವರ 422ನೇ ಬಲಿಯಾಗಿತ್ತು.

ಮೂರು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸ್ಟೇನ್‌ 27 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಾಗದೆ ದೂರ ಉಳಿದಿದ್ದರು. ಜಮಾನ್‌ ಬ್ಯಾಟಿನ ಅಂಚಿಗೆ ಸೋಂಕಿದ ಚೆಂಡು, ಸ್ಪಿಪ್‌ನಲ್ಲಿದ್ದ ಡೀನ್ ಎಲ್ಗರ್ ಮುಷ್ಠಿಯಲ್ಲಿ ಭದ್ರವಾಗುತ್ತಿದ್ದಂತೆ ತಂಡದ ಆಟಗಾರರು ಸಂಭ್ರಮಿಸಿದರು. ಸ್ಟೇನ್ ಅವರನ್ನು ಎತ್ತಿ ಕುಣಿದರು.

ಇಲ್ಲಿಯವರೆಗೆ ಈ ದಾಖಲೆ ವೇಗಿ ಶಾನ್ ಪೊಲಾಕ್ ಹೆಸರಿನಲ್ಲಿತ್ತು. 2015ರ ಜುಲೈನಲ್ಲಿ 80ನೇ ಪಂದ್ಯ ಆಡಿದ ಸ್ಟೇನ್‌ 400ನೇ ವಿಕೆಟ್ ಕಬಳಿಸಿದ್ದರು. ಈ ಮೂಲಕ ವೇಗವಾಗಿ ಈ ಮೈಲುಗಲ್ಲು ದಾಟಿದ ವಿಶ್ವದ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌, ಪಾಕಿಸ್ತಾನ: 47 ಓವರ್‌ಗಳಲ್ಲಿ 181 (ಅಜರ್ ಅಲಿ 36, ಬಾಬರ್ ಆಜಮ್‌ 71; ಡೇಲ್ ಸ್ಟೇನ್‌ 66ಕ್ಕೆ1, ಕಗಿಸೊ ರಬಾಡ 59ಕ್ಕೆ3, ಡ್ವಾನೆ ಒಲಿವರ್‌ 37ಕ್ಕೆ6); ದಕ್ಷಿಣ ಆಫ್ರಿಕಾ: 20.1 ಓವರ್‌ಗಳಲ್ಲಿ 4ಕ್ಕೆ 64 (ಡೀನ್‌ ಎಲ್ಗರ್‌ 22; ಮೊಹಮ್ಮದ್ ಆಮಿರ್‌ 7ಕ್ಕೆ1, ಹಸನ್ ಅಲಿ 37ಕ್ಕೆ1, ಶಹೀನ್ ಶಾ ಅಫ್ರಿದಿ 19ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.