ADVERTISEMENT

ಸನ್‌ರೈಸರ್ಸ್‌: ವಾರ್ನರ್‌ಗೆ ಮರಳಿ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:08 IST
Last Updated 27 ಫೆಬ್ರುವರಿ 2020, 19:08 IST

ನವದೆಹಲಿ : ಆಸ್ಟ್ರೇಲಿಯಾ ತಂಡದ ಆರಂಭ ಆಟಗಾರ ಡೇವಿಡ್‌ ವಾರ್ನರ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ತಂಡವಾದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕತ್ವವನ್ನು ಮರಳಿ ವಹಿಸಿಕೊಳ್ಳಲಿದ್ದಾರೆ.

ಎರಡು ವರ್ಷಗಳ ಹಿಂದೆ ಚೆಂಡು ವಿರೂಪಗೊಳಿಸಿದ ಹಗರಣದಲ್ಲಿ ಸಿಲುಕಿದ್ದ ಕಾರಣ ಅವರ ಮೇಲೆ ಒಂದು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿತ್ತು. ಈ ಅವಧಿಯಲ್ಲಿ ನ್ಯೂಜಿಲೆಂಡ್‌ನ ಕೇನ್ಸ್‌ ವಿಲಿಯಮ್ಸನ್‌ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸಿದ್ದರು.

‘ನನಗೆ ತಂಡವನ್ನು ಮುನ್ನಡೆಸಲು ಮತ್ತೊಮ್ಮೆ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಕೃತಜ್ಞ’ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ಟ್ವಿಟರ್‌ ಖಾತೆಯಲ್ಲಿ ವಾರ್ನರ್‌ ಬರೆದಿದ್ದಾರೆ.

ADVERTISEMENT

2018ರಲ್ಲಿ ವಿಲಿಯಮ್ಸನ್‌ ನಾಯಕರಾಗಿದ್ದಾಗ ತಂಡ ಫೈನಲ್‌ ತಲುಪಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮಣಿದಿತ್ತು. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎಲಿಮಿನೇಟರ್‌ನಲ್ಲಿ ಸೋತ ನಂತರ ಲೀಗ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.