ADVERTISEMENT

ಸುರಕ್ಷಿತ ಪ್ರಯಾಣ ಆರಂಭವಾದರೆ ಮಾತ್ರ ದೇಶಿ ಕ್ರಿಕೆಟ್: ಗಂಗೂಲಿ

ಪಿಟಿಐ
Published 9 ಜುಲೈ 2020, 7:42 IST
Last Updated 9 ಜುಲೈ 2020, 7:42 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ಮುಂಬೈ: ಆಟಗಾರರ ಪ್ರಯಾಣವು ಸುರಕ್ಷಿತವಾಗಿರುವ ಕುರಿತು ಸಂಪೂರ್ಣ ಭರವಸೆ ಮೂಡುವವರೆಗೂ ದೇಶಿ ಟೂರ್ನಿಗಳನ್ನು ಆಯೋಜಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ, ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳಿಗೆ ತಂಡಗಳು ಅಂತರರಾಜ್ಯ ಪ್ರಯಾಣ ಮಾಡಬೇಕು. ಆದರೆ ದೇಶದಲ್ಲಿ ಇನ್ನೂ ಕೊರೊನಾ ವೈರಸ್‌ ಉಪಟಳ ಕಡಿಮೆಯಾಗಿಲ್ಲ. ಆದ್ದರಿಂದ ಪ್ರಯಾಣಕ್ಕೆ ಕೆಲವು ರಾಜ್ಯಗಳಲ್ಲಿ ನಿರ್ಬಂಧವೂ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ, ’ದೇಶಿ ಟೂರ್ನಿಗಳನ್ನು ಆಯೋಜಿಸುವುದು ಮಹತ್ವದ ವಿಷಯ. ಆದರೆ, ಕೊರೊನಾ ವೈರಸ್‌ ಸಂಪೂರ್ಣ ಹತೋಟಿಗೆ ಬಂದ ಮೇಲಷ್ಟೇ ಟೂರ್ನಿಗಳ ಆಯೋಜನೆ ಕುರಿತು ಯೋಚಿಸಬಹುದು‘ ಎಂದು ಸ್ಪೋರ್ಟ್ಸ್‌ ಟಾಕ್‌ನಲ್ಲಿ ಗಂಗೂಲಿ ಹೇಳಿದ್ದಾರೆ.

ADVERTISEMENT

’ಭಾರತ ಬಹಳ ವಿಶಾಲವಾದ ದೇಶ. ದೇಶಿ ಟೂರ್ನಿ ನಡೆದರೆ ರಾಜ್ಯ ತಂಡಗಳು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳ ವಾತಾವರಣ ವಿಭಿನ್ನವಾಗಿಯೇ ಇರುತ್ತದೆ. ಅಲ್ಲದೇ ಈ ಕೊರೊನಾ ಕಾಲದಲ್ಲಿ ಪ್ರಯಾಣ ಸರಿಯಲ್ಲ. ಆಟಗಾರರ ಸುರಕ್ಷತೆಗೆ ನಮ್ಮ ಆದ್ಯತೆ‘ ಎಂದು ಸ್ಪಷ್ಟಪಡಿಸಿದ್ದಾರೆ.

ಬುಧವಾರ 48ನೇ ಜನ್ಮದಿನ ಆಚರಿಸಿಕೊಂಡ ಗಂಗೂಲಿ, ’ಭಾರತದಲ್ಲಿಯೇ ಐಪಿಎಲ್ ಆಯೋಜನೆಗೆ ಆದ್ಯತೆ ಕೊಡಲಾಗುವುದು. ವಿದೇಶದಲ್ಲಿ ಆಯೋಜಿಸುವ ವಿಚಾರಕ್ಕೆ ಎರಡನೇ ಆದ್ಯತೆ‘ ಎಂದಿದ್ದರು. ಅಲ್ಲದೇ ಈ ವರ್ಷ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯಾ ಕಪ್ ಟೂರ್ನಿ ಕೂಡ ರದ್ದಾಗಿದೆ ಎಂದೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.