ಸಂಗ್ರಹ ಚಿತ್ರ
ಕೋಲ್ಕತ್ತ: ಈಡನ್ ಗಾರ್ಡನ್‌ನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯದ ಮುನ್ನಾದಿನ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳ ತಾಲೀಮನ್ನು ಶುಕ್ರವಾರ ಸಂಜೆ ತುಂತುರು ಮಳೆಯ ಕಾರಣ ನಿಗದಿಗಿಂತ ಮೊದಲೇ ಮೊಟಕುಗೊಳಿಸಬೇಕಾಯಿತು.
ಸಂಜೆ 5 ಗಂಟೆಗೆ ತಂಡಗಳು ನೆಟ್ಸ್‌ನಲ್ಲಿ ತೊಡಗಿದ್ದವು. ಆದರೆ ಒಂದು ಗಂಟೆಯ ಬಳಿಕ ಮಳೆ ಶುರುವಾಯಿತು. ಆಟಗಾರರು ಕಿಟ್‌ಗಳೊಡನೆ ಮೈದಾನದಿಂದ ನಿರ್ಗಮಿಸಿದರು.
ಶುಕ್ರವಾರ ಮತ್ತು ಶನಿವಾರ ಕೋಲ್ಕತ್ತ ಸೇರಿದಂತೆ ಹಲವು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಗಾಳಿ, ಗುಡುಗುಸಹಿತ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.