ಸ್ಕಾಟ್ಲೆಂಡ್ ಬ್ಯಾಟರ್ ಮೈಕೆಲ್ ಜೋನ್ಸ್
–ಪಿಟಿಐ ಚಿತ್ರ
ಬ್ರಿಜ್‌ಟೌನ್, ಬಾರ್ಬಡೋಸ್: ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ ಅವರು ಮಂಗಳವಾರ ಇಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಅಬ್ಬರದ ಆರಂಭ ನೀಡಿದರು.
ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ಇಂಗ್ಲೆಂಡ್ ತಂಡದ ಅನುಭವಿ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದ ಜಾರ್ಜ್ (ಬ್ಯಾಟಿಂಗ್ 18; 19ಎ, 4X3) ಹಾಗೂ ಜೋನ್ಸ್ (ಬ್ಯಾಟಿಂಗ್ 30; 20ಎ, 4X3, 6X1) ಅಬ್ಬರಿಸಿದರು. ಇದರಿಂದಾಗಿ ತಂಡವು 6.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿತು.
ಈ ಹಂತದಲ್ಲಿ ಮಳೆ ಬಂದ ಕಾರಣ ಆಟ ಸ್ಥಗಿತವಾಯಿತು.
ಸಂಕ್ಷಿಪ್ತ ಸ್ಕೋರು: ಸ್ಕಾಟ್ಲೆಂಡ್: 6.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 (ಜಾರ್ಜ್ ಮುನ್ಸೆ ಬ್ಯಾಟಿಂಗ್ 18, ಮೈಕೆಲ್ ಜೋನ್ಸ್ ಬ್ಯಾಟಿಂಗ್ 30) ಮಳೆಯಿಂದಾಗಿ ಸ್ಥಗಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.