ADVERTISEMENT

ಟೆಸ್ಟ್‌: ಕ್ರೆಗ್ ಎರ್ವಿನ್ ಶತಕ

ಏಜೆನ್ಸೀಸ್
Published 23 ಫೆಬ್ರುವರಿ 2020, 19:30 IST
Last Updated 23 ಫೆಬ್ರುವರಿ 2020, 19:30 IST
ಕ್ರೆಗ್ ಎರ್ವಿನ್
ಕ್ರೆಗ್ ಎರ್ವಿನ್   

ಢಾಕಾ: ನಾಯಕ ಕ್ರೆಗ್ ಎರ್ವಿನ್ (107; 227 ಎಸೆತ, 13 ಬೌಂಡರಿ) ಶತಕ ಗಳಿಸಿ ಮೀರ್‌ಪುರದ ಶೇರ್–ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ಮಿಂಚಿದರು. ಅವರ ಅಮೋಘ ಆಟದ ನೆರವಿನಿಂದ ಜಿಂಬಾಬ್ವೆ ತಂಡ ಬಾಂಗ್ಲಾದೇಶ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ. ಮೊದಲ ದಿನವಾದ ಶನಿವಾರದ ಮುಕ್ತಾಯಕ್ಕೆ ಪ್ರವಾಸಿ ತಂಡ ಆರು ವಿಕೆಟ್‌ಗಳಿಗೆ 228 ರನ್ ಗಳಿಸಿದೆ.

ಇದು, ಉಭಯ ತಂಡಗಳ ನಡುವಿನ 100ನೇ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆಯ ಆರಂಭಿಕ ಬ್ಯಾಟ್ಸ್‌ಮನ್ ಕೆವಿನ್ ಕಸೂಸ ಕೇವಲ ಎರಡು ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಮಸೌರೆ ಜೊತೆಗೂಡಿದ ಎರ್ವಿನ್ ಎರಡನೇ ವಿಕೆಟ್‌ಗೆ 111 ರನ್ ಸೇರಿಸಿದರು.

ಮಸೌರೆ ಔಟಾದ ನಂತರ ಬಂದವರು ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ಎರ್ವಿನ್ ಬೌಲರ್‌ಗಳನ್ನು ಕಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಿಡಿಸಿದ ಅವರು ದಿನದಾಟ ಮುಕ್ತಾಯಕ್ಕೆ 10 ಎಸೆತಗಳು ಬಾಕಿ ಇದ್ದಾಗ ನಯೀಮ್ ಹಸನ್ ಎಸೆತದಲ್ಲಿ ಬೌಲ್ಡ್ ಆದರು.

ADVERTISEMENT

ಭೋಜನ ವಿರಾಮದ ಎರಡು ಅವಧಿಗಳಲ್ಲಿ ತಲಾ ಎರಡು ವಿಕೆಟ್ ಕಬಳಿಸಿದ ಆಫ್‌ಬ್ರೆಕ್ ಬೌಲರ್‌ ನಯೀಮ್ ಆತಿಥೇಯರಲ್ಲಿ ಭರವಸೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 6ಕ್ಕೆ 228 (ಮಸೌರೆ 64, ಕ್ರೆಗ್ ಎರ್ವಿನ್ 107; ಅಬು ಜಾಯೇದ್ 51ಕ್ಕೆ2, ನಯೀಮ್ ಹಸನ್ 68ಕ್ಕೆ4). ಬಾಂಗ್ಲಾದೇಶ ಎದುರಿನ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.