ADVERTISEMENT

ಐಪಿಎಲ್‌ಗೆ ಈ ಬಾರಿ ಅತ್ಯಧಿಕ ಟಿವಿ ವೀಕ್ಷಕರು: ಗಂಗೂಲಿ

ಪಿಟಿಐ
Published 31 ಆಗಸ್ಟ್ 2020, 18:20 IST
Last Updated 31 ಆಗಸ್ಟ್ 2020, 18:20 IST
ಸೌರವ್‌ ಗಂಗೂಲಿ–ಪಿಟಿಐ ಚಿತ್ರ
ಸೌರವ್‌ ಗಂಗೂಲಿ–ಪಿಟಿಐ ಚಿತ್ರ   

ಪುಣೆ: ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌)‌‌ ಕ್ರಿಕೆಟ್‌ ಟೂರ್ನಿಯ 13ನೇ ಆವೃತ್ತಿಯು ಟಿವಿ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ನಿರ್ಮಿಸಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 19ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ, ಅಬು ಧಾಬಿ ಮತ್ತು ಶಾರ್ಜಾ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದಇಬ್ಬರು ಆಟಗಾರರು ಸೇರಿದಂತೆ 13 ಸದಸ್ಯರಿಗೆ ಕೋವಿಡ್–19 ಸೋಂಕು ದೃಢಪಟ್ಟಿರುವುದು ಟೂರ್ನಿಗೆ ಅಲ್ಪ ಹಿನ್ನಡೆಯಾಗಿದೆ.

’ಟೂರ್ನಿಯನ್ನು ನೇರವಾಗಿ ವೀಕ್ಷಿಸಲು ಈ ಬಾರಿ ಅವಕಾಶ ನೀಡಲಾಗಿಲ್ಲ. ಹೀಗಾಗಿ ಅಭಿಮಾನಿಗಳು ಮನೆಯಲ್ಲೇ ಕುಳಿತು ಟಿವಿಯಲ್ಲಿ ವೀಕ್ಷಿಸುವುದರಿಂದ ಅತ್ಯಧಿಕ ಟಿವಿ ರೇಟಿಂಗ್ಸ್ ಸಿಗುವ ನಿರೀಕ್ಷೆಯಿದೆ‘ ಎಂದು ಸಿಂಬಯೋಸಿಸ್‌ ಗೋಲ್ಡನ್‌ ಜ್ಯೂಬಿಲಿ ಲೆಕ್ಚರ್‌ ಸಿರೀಸ್‌ನಲ್ಲಿ ಆನ್‌ಲೈನ್‌ ಉಪನ್ಯಾಸ ಮಾಡಿದ ಗಂಗೂಲಿ ಹೇಳಿದ್ದಾರೆ.

ADVERTISEMENT

‘ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆ ಜನರಿಗೆ ಪರಿಸ್ಥಿತಿ ಸಹಜಸ್ಥಿತಿಯಲ್ಲಿದೆ ಎಂದು ಎನಿಸಬೇಕು. ಹೀಗಾಗಿ ಐಪಿಎಲ್ ಟೂರ್ನಿ ಮುಖ್ಯವಾಗಿದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.