ADVERTISEMENT

ಎಕ್ಸ್‌ಟ್ರಾ 6; ಒಟ್ಟು ಸ್ಕೋರ್‌ 10!

ಆಸ್ಟ್ರೇಲಿಯಾದ ನ್ಯಾಷನಲ್‌ ಇಂಡಿಜೀನಸ್‌ ಕ್ರಿಕೆಟ್ ಚಾಂಪಿಯನ್‌ಷಿಪ್‌

ಏಜೆನ್ಸೀಸ್
Published 6 ಫೆಬ್ರುವರಿ 2019, 15:27 IST
Last Updated 6 ಫೆಬ್ರುವರಿ 2019, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಡ್ನಿ: ಶೂನ್ಯ ಸಾಧನೆ ಮಾಡಿದ 10 ಬ್ಯಾಟ್ಸ್‌ವುಮನ್‌. ಆರು ಇತರೆ ರನ್‌. ತಂಡದ ಒಟ್ಟು ಮೊತ್ತ 10 ರನ್‌!

ಇಲ್ಲಿನ ಅಲಿಸ್‌ ಸ್ಪ್ರಿಂಗ್ಸ್‌ನಲ್ಲಿ ಬುಧವಾರ ನಡೆದ ನ್ಯಾಷನಲ್‌ ಇಂಡಿಜೀನಸ್‌ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಟ್ವೆಂಟಿ–20 ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ತಂಡ ಮಾಡಿದ ‘ಸಾಧನೆ’ ಇದು.

ನ್ಯೂ ಸೌತ್‌ ವೇಲ್ಸ್ ಎದುರು ನಡೆದ ಪಂದ್ಯದಲ್ಲಿ ತಂಡದ ಪರವಾಗಿ ಬ್ಯಾಟ್ ಮೂಲಕ ರನ್‌ ಗಳಿಸಿದವರು ಆರಂಭಿಕ ಆಟಗಾರ್ತಿ ಫೆಬಿ ಮನ್ಸೆಲ್‌ ಮಾತ್ರ. ಅವರು ‘ಸಿಡಿಸಿದ’ ಬೌಂಡರಿ ಮೂಲಕ ತಂಡ ಎರಡಂಕಿ ಮೊತ್ತ ತಲುಪಿತು. 36 ನಿಮಿಷ ಕ್ರೀಸ್‌ನಲ್ಲಿದ್ದ ಅವರು 33 ಎಸೆತ ಎದುರಿಸಿದ್ದರು.

ADVERTISEMENT

ರೊಕ್ಸಾನಿ ವ್ಯಾನ್ ವೀನ್‌ ಎರಡು ಓವರ್‌ಗಳಲ್ಲಿ ಕೇವಲ ಒಂದು ರನ್ ನೀಡಿ ಐದು ವಿಕೆಟ್ ಉರುಳಿಸಿದರು. ನವೊಮಿ ವುಡ್ಸ್‌ ಎರಡೇ ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದರು. ತಂಡದ ಇನಿಂಗ್ಸ್‌ 62 ಎಸೆತಗಳಲ್ಲಿ ಮುಕ್ತಾಯಗೊಂಡಿತು.

ನ್ಯೂ ಸೌತ್‌ವೇಲ್ಸ್ ಕೇವಲ 17 ಎಸೆತಗಳಲ್ಲಿ ಗೆಲುವು ಸಾಧಿಸಿತು. ಈ ತಂಡಕ್ಕೂ ಐದು ಇತರೆ ರನ್‌ಗಳು ಲಭಿಸಿದ್ದವು.

ಸಂಕ್ಷಿಪ್ತ ಸ್ಕೋರು: ಸೌತ್ ಆಸ್ಟ್ರೇಲಿಯಾ: 10.2 ಓವರ್‌ಗಳಲ್ಲಿ 10 (ಫೆಬಿ ಮನ್ಸೆಲ್‌ 4; ಹನಾ ಡಾರ್ಲಿಂಗ್ಟನ್‌ 3ಕ್ಕೆ1, ಜೂಲಿ ಮುಯಿರ್‌ 2ಕ್ಕೆ2, ರೊಕ್ಸಾನಿ ವ್ಯಾನ್ ವೀನ್‌ 1ಕ್ಕೆ5, ನವೊಮಿ ವುಡ್ಸ್‌ 0ಗೆ2); ನ್ಯೂ ಸೌತ್‌ ವೇಲ್ಸ್‌: 2.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 11 (ನವೊಮಿ ವುಡ್ಸ್ ಅಜೇಯ 3, ಹೊಫ್‌ಮಿಸ್ಟರ್‌ 3; ಫೆಬಿ ಮನ್ಸೆಲ್‌ 4ಕ್ಕೆ2). ಫಲಿತಾಂಶ: ನ್ಯೂ ಸೌತ್‌ವೇಲ್ಸ್‌ಗೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.