ADVERTISEMENT

ರಾಷ್ಟ್ರೀಯ ಸೀನಿಯರ್ ಟ್ರ್ಯಾಕ್‌–ಫೀಲ್ಡ್‌ ಕುಡ ಇಂದಿನಿಂದ

85 ಅಥ್ಲೀಟ್‌ಗಳ ಸ್ಪರ್ಧೆ; ಕೊರೊನಾ ಕಾಲಘಟ್ಟದ ಮೊದಲ ಕೂಟ, ದ್ಯುತಿ ಚಾಂದ್, ಕನ್ನಡತಿ ಪೂವಮ್ಮ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 16:26 IST
Last Updated 17 ಫೆಬ್ರುವರಿ 2021, 16:26 IST
ಎಂ.ಆರ್. ಪೂವಮ್ಮ
ಎಂ.ಆರ್. ಪೂವಮ್ಮ   

ಪಟಿಯಾಲ: ಕೊರೊನಾ ಕಾಲಘಟ್ಟದ ಮೊದಲ ಇಂಡಿಯನ್ ಗ್ರ್ಯಾನ್‌ ಪ್ರೀ ಸೀನಿಯರ್ ಟ್ರ್ಯಾಕ್‌ ಮತ್ತು ಫೀಲ್ಡ್‌ ಕೂಟವು ಗುರುವಾರ ನಡೆಯಲಿದೆ.

85 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಕರ್ನಾಟಕದ ಎಂ.ಆರ್. ಪೂವಮ್ಮ, ಸ್ಪ್ರಿಂಟರ್ ದ್ಯುತಿ ಚಾಂದ್, ಅಂಜಲಿ ದೇವಿ, ಶುಭಾ ವೆಂಕಟೇಶನ್, ವಿ.ಎಂ. ಶಾಲಿನಿ ಮತ್ತು ಚಂದಾ ಅವರು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲಿದ್ಧಾರೆ.

ಪುರುಷರ ವಿಭಾಗದಲ್ಲಿ ಓಟಗಾರ ಮೊಹಮ್ಮದ್ ಅನಾಸ್ ಯಾಹ್ಯಾ, ಅಮಿಯಾ ಕುಮಾರ್ ಮಲಿಕ್, ಅರೋಕ್ಯಾ ರಾಜೀವ, ನೊಹಾ ನಿರ್ಮಲ್ ಟಾಮ್, ಅಮೋಜ್ ಜೇಕಬ್, ಧಾರುಣ್ ಅಯ್ಯಸಾಮಿ ಮತ್ತು ಯುಗಂತ್ ಶೇಖರ್ ಸಿಂಗ್ ಕಣಕ್ಕಿಳಿಯುವರು.

ADVERTISEMENT

ಆದರೆ ಪ್ರಮುಖ ಅಥ್ಲೀಟ್‌ಗಳಾದ ಹಿಮಾ ದಾಸ್, ನೀರಜ್ ಚೋಪ್ರಾ ಸ್ಪರ್ಧಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.