ADVERTISEMENT

ಮಾಜಿ ಕ್ರಿಕೆಟಿಗ ವಿವೇಕ್ ಯಾದವ್ ಕೋವಿಡ್‌ನಿಂದ ಸಾವು

ಪಿಟಿಐ
Published 6 ಮೇ 2021, 15:22 IST
Last Updated 6 ಮೇ 2021, 15:22 IST
ಕ್ರಿಕೆಟ್
ಕ್ರಿಕೆಟ್   

ಜೈಪುರ: ಮಾಜಿ ಕ್ರಿಕೆಟಿಗ, ರಾಜಸ್ಥಾನ ತಂಡದ ಲೆಗ್ ಸ್ಪಿನ್ನರ್ ವಿವೇಕ್ ಯಾದವ್ (36) ಅವರು ಕೋವಿಡ್‌–19 ಸೋಂಕಿನಿಂದ ನಿಧನರಾಗಿದ್ದಾರೆ. ರಣಜಿ ಟ್ರೋಫಿ ಗೆದ್ದ ತಂಡದಲ್ಲಿ ಅವರು ಸದಸ್ಯರಾಗಿದ್ದರು. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ವಿವೇಕ್ ಯಾದವ್ 57 ವಿಕೆಟ್‌ ಉರುಳಿಸಿದ್ದರು. 2010–11ರ ರಣಜಿ ಋತುವಿನಲ್ಲಿ ಅವರು ಶ್ರೇಷ್ಠ ಬೌಲಿಂಗ್ ಮಾಡಿದ್ದರು. ಬರೋಡಾ ಎದುರಿನ ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ 91ಕ್ಕೆ4 ವಿಕೆಟ್ ಗಳಿಸಿದ್ದ ಅವರು ರಾಜಸ್ಥಾನದ ಇನಿಂಗ್ಸ್ ಮುನ್ನಡೆಗೆ ಕಾರಣರಾಗಿದ್ದರು. ಅಗ್ರ ಕ್ರಮಾಂಕದ ನಾಲ್ವರು ಕೂಡ ಅವರ ಬೌಲಿಂಗ್‌ನಲ್ಲಿ ವಾಪಸಾಗಿದ್ದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿವೇಕ್‌, ಕಿಮೋಥೆರಪಿಗಾಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಪರೀಕ್ಷಿಸಿದಾಗ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.