ADVERTISEMENT

ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟರ್ಸ್‌ಗೆ ಪ್ರಶಸ್ತಿ

ಮೆಟ್ರೊ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 20:13 IST
Last Updated 13 ನವೆಂಬರ್ 2018, 20:13 IST
ಮೆಟ್ರೊ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಗುಂಪು–1, ಡಿವಿಷನ್‌–4ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಕೆಜಿಎಫ್‌ನ ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟರ್ಸ್‌ ತಂಡ (ನಿಂತವರು, ಎಡದಿಂದ) ಆರ್‌.ಪ್ರವೀಣ್‌ ಸಿಂಗ್‌, ಅಂಕುಶ್‌ ಬೋಪಣ್ಣ, ಎನ್‌.ತೇಜಸ್‌, ಆದಿತ್ಯ, ಉದಯ್‌ ಶಂಕರ್‌, ವಿನೋದ್‌ ಕುಮಾರ್‌, ಪವನ್‌ ಜೆ.ಗೋಖಲೆ, ಸುನಿಲ್‌ ಮತ್ತು ಮೊಹಮ್ಮದ್‌ ಸಫಿ. (ಕುಳಿತವರು) ಗೋವಿಂದರಾಜ್‌ ಗೌಡ, ಪ್ರಮಿತ್‌ ಕುಮಾರ್‌, ಎ.ಅವಿನಾಶ್‌, ಸಂತೋಷ್‌ಕುಮಾರ್ ಸಿಂಗ್‌, ಮಹೇಶ್‌ ಹರಿಹರನ್‌ (ಕಾರ್ಯದರ್ಶಿ), ನೀಲ್‌ ಮೈಕಲ್‌ ಜೋಸೆಫ್‌ (ಉಪಾಧ್ಯಕ್ಷ), ಸೈಯದ್‌ ಅಜಂ (ಮ್ಯಾನೇಜರ್‌), ಎಚ್‌.ಎಸ್‌.ಶಶಿಧರ್‌ (ನಾಯಕ), ಕೆ.ವಿ.ಗಣೇಶ್‌ ಮತ್ತು ಸೈಯದ್‌ ಜುನೈದ್‌ (ಮಂಡಿಯೂರಿ ಕುಳಿತವರು)

ಬೆಂಗಳೂರು: ಸಂತೋಷ್‌ಕುಮಾರ್‌ ಸಿಂಗ್‌ (65ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಕೆಜಿಎಫ್‌ನ ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟರ್ಸ್‌ ತಂಡ ಮೆಟ್ರೊ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಗುಂಪು–1, ಡಿವಿಷನ್‌–4ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಫೈನಲ್‌ನಲ್ಲಿ ಫ್ರೆಂಡ್ಸ್‌ ಯೂನಿಯನ್‌ 37ರನ್‌ಗಳಿಂದ ಕೋಲ್ಸ್‌ ಕ್ಲಬ್‌ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಫ್ರೆಂಡ್ಸ್‌ ಯೂನಿ ಯನ್‌ ಕ್ರಿಕೆಟರ್ಸ್‌, ಕೆಜಿಎಫ್‌: ಮೊದಲ ಇನಿಂಗ್ಸ್‌: 55 ಓವರ್‌ಗಳಲ್ಲಿ 9 ವಿಕೆಟ್‌ಗೆ 247 (ಕೆ.ವಿ.ಗಣೇಶ್‌ 96, ಎಚ್‌.ಎಸ್‌.ಶಶಿಧರ್‌ 53; ಡಿ.ಎಚ್‌.ಸುನಿಲ್‌ ಕುಮಾರ್‌ 37ಕ್ಕೆ2, ಜಿ.ಶಾಂತರಾಜು 41ಕ್ಕೆ4). ಮತ್ತು 27.5 ಓವರ್‌ಗಳಲ್ಲಿ 149 (ಅಂಕುಶ್‌ ಬೋಪಣ್ಣ 32; ಡಿ.ಎಚ್‌.ಸುನಿಲ್‌ ಕುಮಾರ್‌ 32ಕ್ಕೆ3, ಕೆ.ಸೋಮಶೇಖರ್‌ 41ಕ್ಕೆ4).

ADVERTISEMENT

ಕೋಲ್ಸ್‌ ಕ್ಲಬ್‌: 44.4 ಓವರ್‌ ಗಳಲ್ಲಿ 182 (ಕೆ.ಬಿ.ರೂಪೇಶ್‌ 41; ಸಂತೋಷ್‌ಕುಮಾರ್‌ ಸಿಂಗ್‌ 50 ಕ್ಕೆ2, ಪ್ರಮಿತ್‌ ಕುಮಾರ್‌ 45ಕ್ಕೆ3). ಮತ್ತು 30 ಓವರ್‌ಗಳಲ್ಲಿ 177 (ಅತಿಕ್‌ಉಲ್ಲಾ ಖಾನ್‌ ಔಟಾಗದೆ 41; ಸಂತೋಷ್‌ಕುಮಾರ್‌ ಸಿಂಗ್‌ 65ಕ್ಕೆ5, ಪ್ರಮಿತ್‌ ಕುಮಾರ್‌ 25ಕ್ಕೆ2).

ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ ಗೆ 37ರನ್‌ ಗೆಲುವು ಹಾಗೂ ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.