ADVERTISEMENT

ಸೈಕ್ಲಿಸ್ಟ್‌ಗಳಿಗೆ ಹುರುಪು ತುಂಬಿದ ಗಂಭೀರ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:31 IST
Last Updated 10 ಡಿಸೆಂಬರ್ 2018, 20:31 IST
ಉದ್ಭವ್ ಶಾಲೆಗಾಗಿ ಸಂಗ್ರಹವಾದ ನಿಧಿಯ ಮೊತ್ತದ ಚೆಕ್‌ನೊಂದಿಗೆ ಸೈಕ್ಲಿಸ್ಟ್‌ಗಳು ಮತ್ತು ಗಣ್ಯರ ಜೊತೆ ಮಕ್ಕಳು ಕಾಣಿಸಿಕೊಂಡರು
ಉದ್ಭವ್ ಶಾಲೆಗಾಗಿ ಸಂಗ್ರಹವಾದ ನಿಧಿಯ ಮೊತ್ತದ ಚೆಕ್‌ನೊಂದಿಗೆ ಸೈಕ್ಲಿಸ್ಟ್‌ಗಳು ಮತ್ತು ಗಣ್ಯರ ಜೊತೆ ಮಕ್ಕಳು ಕಾಣಿಸಿಕೊಂಡರು   

ಬೆಂಗಳೂರು: ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ನೂರಾರು ಕಿಲೋಮೀಟರ್‌ ದೂರ ಸೈಕಲ್ ತುಳಿದು ಬಂದ ಮಹಿಳಾ ಸೈಕ್ಲಿಸ್ಟ್‌ಗಳಿಗೆ ಕ್ರಿಕೆಟಿಗ ಗೌತಮ್‌ ಗಂಭೀರ್ ಹುರುಪು ತುಂಬಿದರು. ನವೆಂಬರ್‌ 30ರಂದು ಮುಂಬೈಯಲ್ಲಿ ಆರಂಭಗೊಂಡ ಸೈಕ್ಲಾಥಾನ್‌ ನಗರದ ಥಣಿಸಂದ್ರದಲ್ಲಿರುವ ಬಿಎಫ್‌ಎಸ್‌ಐ ಆವರಣದ ಗ್ಲೋಬಲ್ ಅಕಾಡೆಮಿಯಲ್ಲಿ ಸೋಮವಾರ ಮುಕ್ತಾಯಗೊಂಡಿತು.

ಪುಣೆ, ಸತಾರ, ಕೊಲ್ಹಾಪುರ, ಬೆಳಗಾವಿ, ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗ ಮತ್ತು ತುಮಕೂರು ಮೂಲಕ ಸೈಕ್ಲಿಸ್ಟ್‌ಗಳು ಬೆಂಗಳೂರು ತಲುಪಿದ್ದರು. ಹೈದರಾಬಾದ್‌ನಲ್ಲಿರುವ ಉದ್ಭವ್ ಶಾಲೆಗಾಗಿ ಹಣ ಸಂಗ್ರಹಿಸುವುದು ಸೈಕ್ಲಾಥಾನ್‌ನ ಉದ್ದೇಶವಾಗಿತ್ತು.

ಸಮಾರೋಪ ಕಾರ್ಯಕ್ರಮದಲ್ಲಿ ರಾಜಯ ಪೊಲೀಸ್‍ ಮಹಾನಿರ್ದೇಶಕಿ ನೀಲಮಣಿ ರಾಜು, ಆರ್‍.ಬಿ.ಎಲ್ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಅಹುಜಾ, ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವಿಸಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಪಂಚನಾಥನ್ ಮತ್ತಿತರರು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.