ADVERTISEMENT

ಡಬ್ಲ್ಯುಪಿಎಲ್: ಗುಜರಾತ್ ಸ್ಪರ್ಧಾತ್ಮಕ ಮೊತ್ತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 17:02 IST
Last Updated 30 ಜನವರಿ 2026, 17:02 IST
ಗುಜರಾತ್ ಜೈಂಟ್ಸ್ ತಂಡದ ಆ್ಯಷ್ಲೆ ಗಾರ್ಡನರ್‌  –ಪಿಟಿಐ ಚಿತ್ರ
ಗುಜರಾತ್ ಜೈಂಟ್ಸ್ ತಂಡದ ಆ್ಯಷ್ಲೆ ಗಾರ್ಡನರ್‌  –ಪಿಟಿಐ ಚಿತ್ರ   

ವಡೋದರ: ನಾಯಕಿ ಆ್ಯಷ್ಲೆ ಗಾರ್ಡನರ್ ಮತ್ತು ಜಾರ್ಜಿಯಾ ವೆರ್ಹಾಮ್ ಅವರ ದಿಟ್ಟ ಬ್ಯಾಟಿಂಗ್‌ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ  ಸ್ಪರ್ಧಾತ್ಮಕ ಮೊತ್ತ ಗಳಿಸಿತು. 

ಶುಕ್ರವಾರ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ಎದುರು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 167 ರನ್ ಗಳಿಸಿತು. 

ಮುಂಬೈ ತಂಡದ ಬೌಲರ್ ಶಬ್ನಿಮ್ ಇಸ್ಮಾಯಿಲ್ ಅವರು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಪೆಟ್ಟು ಕೊಟ್ಟರು. ಬೆತ್ ಮೂನಿ (5 ರನ್ ) ಅವರ ವಿಕೆಟ್ ಗಳಿಸಿದರು. ಈ ಹಂತದಲ್ಲಿ ಸೋಫಿ ಡಿವೈನ್ (25; 21ಎ, 4X3) ಮತ್ತು ಅನುಷ್ಕಾ ಶರ್ಮಾ (33; 31ಎ, 4X4, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿ ಚೇತರಿಕೆ ನೀಡಿದರು. 

ADVERTISEMENT

ಅಮೆಲಿಯಾ ಕೆರ್ ಅವರು ಅನುಷ್ಕಾ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು.  ಎರಡು ಓವರ್‌ಗಳ ನಂತರ ಸೋಫಿ ಡಿವೈನ್ ಕೂಡ ಔಟಾದರು. ಈ ಸಂದರ್ಭದಲ್ಲಿ ಗಾರ್ಡನರ್ (46; 28ಎ, 4X7, 6X1) ಮತ್ತು ಜಾರ್ಜಿಯಾ (ಔಟಾಗದೇ 44, 26ಎ, 4X4, 6X2) ತಂಡದ ಬಲ ಹೆಚ್ಚಿಸಿದರು.  

ಗುಜರಾತ್ ತಂಡವು 8 ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈ 6 ಅಂಕಗಳಿಸಿದೆ. 

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 4ಕ್ಕೆ167 (ಸೋಫಿ ಡಿವೈನ್ 25, ಅನುಷ್ಕಾ ಶರ್ಮಾ 33, ಆ್ಯಷ್ಲೆ ಗಾರ್ಡನರ್ 46, ಜಾರ್ಜಿಯಾ ವೆರ್ಹಾಮ್ ಔಟಾಗದೇ 44, ಅಮೆಲಿಯಾ ಕೆರ್ 26ಕ್ಕೆ2) ವಿರುದ್ಧ ಮುಂಬೈ ಇಂಡಿಯನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.