ADVERTISEMENT

ಹಾರ್ದಿಕ್–ನತಾಶಾಗೆ ಗಂಡುಮಗುವಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 15:15 IST
Last Updated 30 ಜುಲೈ 2020, 15:15 IST
ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಚಿತ್ರ 
ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಚಿತ್ರ    

ಭಾರತ ಕ್ರಿಕೆಟ್ ತಂಡದಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಅವರ ಸಂಗಾತಿ ನತಾಶಾ ಸ್ಟಾಂಕೊವಿಚ್ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ನವಜಾತ ಶಿಶುವಿನ ಅಂಗೈ ಹಿಡಿದುಕೊಂಡಿರುವ ತಮ್ಮ ಕೈ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಹಾರ್ದಿಕ್, ’ದೇವರು ನಮಗೆ ಪುತ್ರನನ್ನು ಕರುಣಿಸಿದ್ದಾನೆ‘ ಎಂದು ಬರೆದಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಹಾರ್ದಿಕ್ ಮತ್ತು ನತಾಶಾ ಅವರ ನಿಶ್ಚಿತಾರ್ಥ ವಾಗಿತ್ತು. ನಂತರ ಅವರು ಜೊತೆಗಿದ್ದರು. ಹೋದ ಮೇ ತಿಂಗಳಲ್ಲಿ ನತಾಶಾ ಗರ್ಭಿಣಿಯಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಬಹಿರಂಗಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.