ADVERTISEMENT

ಹೆರಾನ್ಸ್‌ ಕ್ಲಬ್‌ಗೆ ಪ್ರಶಸ್ತಿ

ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌: ಮಿಂಚಿದ ಪುಷ್ಪಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 12:54 IST
Last Updated 26 ಜನವರಿ 2020, 12:54 IST
ಕೆಎಸ್‌ಸಿಎ ಮಹಿಳಾ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಹೆರಾನ್ಸ್‌ ಕ್ಲಬ್‌ ತಂಡದವರ ಸಂಭ್ರಮ (ನಿಂತವರು; ಎಡದಿಂದ) ಧನ್ಯಾ ಗೌಡ, ಪೂಜಾ ಕುಮಾರಿ, ಎಸ್‌.ಶುಭಾ, ಪ್ರತ್ಯೂಷಾ ಕುಮಾರ್‌, ರಾಮೇಶ್ವರಿ ಗಾಯಕವಾಡ್‌, ಅನಘಾ ಮುರಳಿ, ಸಿ.ಎಸ್‌.ಸವಿ, ಪುಷ್ಪಾ ಕಿರೇಸುರ್‌ ಮತ್ತು ಮುರಳೀಧರ್‌ (ಮ್ಯಾನೇಜರ್‌). (ಮಂಡಿಯೂರಿ ಕುಳಿತವರು) ಕೆ.ರಕ್ಷಿತಾ, ಸಂಜನಾ ಬಾಟ್ನಿ, ಜಿ.ದಿವ್ಯಾ (ನಾಯಕಿ), ಸಿ.ಪ್ರತ್ಯೂಷಾ ಮತ್ತು ರಕ್ಷಿತಾ ನಾಯಕ್‌.

ಬೆಂಗಳೂರು: ಪುಷ್ಪಾ ಕಿರೇಸುರ್‌ (7ಕ್ಕೆ3) ಮತ್ತು ರಾಮೇಶ್ವರಿ ಗಾಯಕವಾಡ್‌ (4ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಹೆರಾನ್ಸ್‌ ಕ್ಲಬ್‌ ತಂಡ ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿದೆ.

ಆರ್‌ಎಸ್‌ಐ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಜಿ.ದಿವ್ಯಾ ಮುಂದಾಳತ್ವದ ಹೆರಾನ್ಸ್‌ ಕ್ಲಬ್‌ ತಂಡವು 7 ವಿಕೆಟ್‌ಗಳಿಂದ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (1) ತಂಡವನ್ನು ಪರಾಭವಗೊಳಿಸಿತು.

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (1): 26.4 ಓವರ್‌ಗಳಲ್ಲಿ 86 (ವಂದನಾ ಮಹಾಜನ್‌ 23; ಪುಷ್ಪಾ ಕಿರೇಸುರ್‌ 7ಕ್ಕೆ3, ರಾಮೇಶ್ವರಿ ಗಾಯಕವಾಡ್‌ 4ಕ್ಕೆ2, ಸಿ.ಪ್ರತ್ಯೂಷಾ 20ಕ್ಕೆ2, ಜಿ.ದಿವ್ಯಾ 12ಕ್ಕೆ2).

ADVERTISEMENT

ಹೆರಾನ್ಸ್‌ ಕ್ಲಬ್‌: 21.1 ಓವರ್‌ಗಳಲ್ಲಿ 3 ವಿಕೆಟ್‌ಗೆ 87 (ಪ್ರತ್ಯೂಷಾ ಕುಮಾರ್‌ ಔಟಾಗದೆ 47, ಕೆ.ರಕ್ಷಿತಾ 27; ಆಕಾಂಕ್ಷಾ ಕೊಹ್ಲಿ 19ಕ್ಕೆ3).

ಫಲಿತಾಂಶ: ಹೆರಾನ್ಸ್‌ ಕ್ಲಬ್‌ಗೆ 7 ವಿಕೆಟ್‌ ಗೆಲುವು ಹಾಗೂ ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.