ADVERTISEMENT

ಟಿ20 ಕ್ರಿಕೆಟ್ ವಿಶ್ವಕಪ್: ಇಂದು ಇಂಗ್ಲೆಂಡ್‌ಗೆ ಬಾಂಗ್ಲಾ ಸವಾಲು

ಪಿಟಿಐ
Published 26 ಅಕ್ಟೋಬರ್ 2021, 21:06 IST
Last Updated 26 ಅಕ್ಟೋಬರ್ 2021, 21:06 IST
ಏಯಾನ್ ಮಾರ್ಗನ್‌– ಎಎಫ್‌ಪಿ ಚಿತ್ರ
ಏಯಾನ್ ಮಾರ್ಗನ್‌– ಎಎಫ್‌ಪಿ ಚಿತ್ರ   

ಅಬುಧಾಬಿ (ಪಿಟಿಐ): ಮೊದಲ ಪಂದ್ಯದಲ್ಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಇಂಗ್ಲೆಂಡ್ ತಂಡವು ಬುಧವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಸೂಪರ್ –12 ಹಂತದ ಮೊದಲ ಗುಂಪಿನಲ್ಲಿ ಶ್ರೀಲಂಕಾ ಎದುರು ಸೋತಿರುವ ಬಾಂಗ್ಲಾದೇಶದ ತಂಡಕ್ಕೆ ಇಂಗ್ಲೆಂಡ್ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.

ಇಂಗ್ಲೆಂಡ್ ಬೌಲಿಂಗ್ ಪಡೆಯು ಬಲಿಷ್ಠವಾಗಿದೆ. ವಿಂಡೀಸ್ ತಂಡವನ್ನು 55 ರನ್‌ಗಳಿಗೆ ಕಟ್ಟಿಹಾಕಿತ್ತು. ಬೆನ್ ಸ್ಟೋಕ್ಸ್‌, ಜೋಫ್ರಾ ಆರ್ಚರ್ ಮತ್ತು ಸ್ಯಾಮ್ ಕರನ್ ಅವರ ಅನುಪಸ್ಥಿತಿಯಲ್ಲಿಯೂ ತಂಡದ ಬೌಲಿಂಗ್ ಬಳಗ ಬಲಾಢ್ಯವಾಗಿದೆ.

ADVERTISEMENT

ಆಲ್‌ರೌಂಡರ್ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಇಂಗ್ಲೆಂಡ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಬಾಂಗ್ಲಾ ತಂಡದಲ್ಲಿ ಶಕೀಬ್ ಅಲ್ ಹಸನ್ ಅವರಿಗೆ ಹೆಚ್ಚು ಅವಕಾಶ ನೀಡಿದರೆ ಪಂದ್ಯ ಗೆಲ್ಲಿಸಿಕೊಡುವಂತಹ ಸಮರ್ಥರಾಗಿದ್ದಾರೆ. ಲಂಕಾ ಎದುರಿನ ಮೊದಲ ಪಂದ್ಯದಲ್ಲಿ ಅವರು ನಾಲ್ಕು ಎಸೆತಗಳ ಅಂತರದಲ್ಲಿ ಎಡು ವಿಕೆಟ್ ಗಳಿಸಿದ್ದರು. ಲಿಟನ್ ದಾಸ್, ಮೆಹದಿ ಹಸನ್ ಅವರು ಲಯಕ್ಕೆ ಮರಳಿದರೆ ಬ್ಯಾಟಿಂಗ್ಬಲಿಷ್ಠವಾಗಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಬುಧವಾರ ಇನ್ನೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್‌ –ನಮೀಬಿಯಾ ತಂಡಗಳು ಸೆಣಸಲಿವೆ. ಸಂಜೆ 7.30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.