ದುಬೈ: ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ನಿಗದಿಯ ಅವಧಿಯಲ್ಲಿ ಓವರ್‌ಗಳನ್ನು ಮುಗಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸ್ಟಾಪ್ ವಾಚ್ ನಿಯಮವನ್ನು ಜಾರಿಗೆ ತಂದಿದೆ. ಪ್ರಸ್ತುತ ಆರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಆವೃತ್ತಿಯಲ್ಲಿ ಈ ನಿಯಮ ಜಾರಿ ಮಾಡಿದೆ.
ಈ ನಿಯಮದಿಂದಾಗಿ ಶಾರ್ಟ್ ರನ್ ಸಂದರ್ಭದಲ್ಲಿ ಯಾವ ಬ್ಯಾಟರ್‌ಗೆ ಸ್ಟ್ರೈಕ್ ಸಿಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ.
ನಿಗದಿಯ ಓವರ್‌ಗಳ ಕ್ರಿಕೆಟ್ ಮಾದರಿಗಳಲ್ಲಿ ಈಗಾಗಲೇ ಈ ಸ್ಟಾಪ್ ವಾಚ್ ಬಳಕೆ ಮಾಡಲಾಗುತ್ತಿದೆ.
ಒಂದು ಓವರ್ ಮುಗಿದಾಗ ನಂತರದ ಓವರ್ ಆರಂಭಿಸಲು ಶೂನ್ಯದಿಂದ 60 ಸಕೆಂಡುಗಳವರೆಗೆ ವೇಳೆಯನ್ನು ಪ್ರದರ್ಶಿಸುವ ಎಲೆಕ್ಟ್ರಾನಿಕ್ ಗಡಿಯಾರ ಮೈದಾನದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಅವಧಿಯನ್ನು ಉಲ್ಲಂಘಿಸಿದರೆ ಎಚ್ಚರಿಕೆ ನೀಡಲಾಗುತ್ತದೆ. ಎರಡು ಬಾರಿ ಎಚ್ಚರಿಕೆ ಮತ್ತು ಮೂರನೇ ಬಾರಿ ಬೌಲಿಂಗ್ ಮಾಡುವ ತಂಡಕ್ಕೆ ಐದು ರನ್ ಪೆನಾಲ್ಟಿ ಹಾಕಲಾಗುತ್ತದೆ. 80 ಓವರ್‌ಗಳು ಪೂರ್ಣಗೊಂಡಾಗ ವಾಚ್ ಅನ್ನು ಶೂನ್ಯಕ್ಕೆ ಮರುಹೊಂದಾಣಿಕೆ ಮಾಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.