ADVERTISEMENT

ಗೆದ್ದರೆ ನಾಕೌಟ್‌; ಸೋತರೆ ‘ಔಟ್‌’

ಕ್ರಿಕೆಟ್‌: ಮಧ್ಯಪ್ರದೇಶಕ್ಕೆ 247 ರನ್‌ ಮುನ್ನಡೆ, ಕರ್ನಾಟಕಕ್ಕೆ ಜಯ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 18:59 IST
Last Updated 23 ಜನವರಿ 2019, 18:59 IST
ಮಧ್ಯಪ್ರದೇಶ ತಂಡದ ದೇವ್ ಬರ್ನಲ್ ಹಾಗೂ ಸೂರಜ್ ವಶಿಷ್ಠ
ಮಧ್ಯಪ್ರದೇಶ ತಂಡದ ದೇವ್ ಬರ್ನಲ್ ಹಾಗೂ ಸೂರಜ್ ವಶಿಷ್ಠ   

ಬೆಳಗಾವಿ: ಮಧ್ಯಪ್ರದೇಶ ತಂಡ 19 ವರ್ಷದೊಳಗಿನವರ ಕೂಚ್ ಬೆಹರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಎದುರಿನ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿತು.

ಆತಿಥೇಯರು ಪಂದ್ಯದ ಕೊನೆಯ ದಿನವಾದ ಗುರು ವಾರ ಗೆದ್ದರಷ್ಟೇ ನಾಕೌಟ್‌ ಪ್ರವೇಶಿಸಲಿದ್ದಾರೆ. ಇಲ್ಲವಾದರೆ ಟೂರ್ನಿಯಿಂದ ‘ಔಟ್‌’ ಆಗಲಿದ್ದಾರೆ.

ADVERTISEMENT

ಸಂಕ್ಷಿಪ್ತ ಸ್ಕೋರು:ಮಧ್ಯಪ್ರದೇಶ ಮೊದಲ ಇನಿಂಗ್ಸ್ 275; ದ್ವಿತೀಯ ಇನಿಂಗ್ಸ್‌ 73 ಓವರ್‌ಗಳಲ್ಲಿ ವಿಕೆಟ್‌ ನಷ್ಟ ವಿಲ್ಲದೆ 161 (ದೇವ್‌ ಬರ್ನಲ್‌ 59, ಸೂರಜ್‌ ವಶಿಷ್ಠ 90). ಕರ್ನಾಟಕ ಪ್ರಥಮ ಇನಿಂಗ್ಸ್‌ 83.1 ಓವರ್‌ಗಳಲ್ಲಿ 189.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.