ಕೋಲ್ಕತ್ತ/ಬೆಂಗಳೂರು: ‘ಭಾರತ ತಂಡವನ್ನು ಪ್ರತಿನಿಧಿಸುವುದಕ್ಕಿಂತ ಶ್ರೇಷ್ಠ ಸಾಧನೆ ಮತ್ತೊಂದಿಲ್ಲ. ಜೀವನದ ಈ ಹಂತದಲ್ಲಿ ನಾನು ಅಂತಹದೊಂದು ಅವಕಾಶಕ್ಕಾಗಿ ಎದುರು ನೋಡುತ್ತಿರುವೆ’ ಎಂದು ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಅವರು ಏನೇ ನಿರ್ಧಾರ ಕೈಗೊಂಡರೂ ನಾನು ಗೌರವಿಸುತ್ತೇನೆ. ಆದರೆ ಭಾರತ ತಂಡದಲ್ಲಿ (ಟಿ20 ವಿಶ್ವಕಪ್ ಟೂರ್ನಿ) ಆಡಲು ಸಂಪೂರ್ಣ ಸಿದ್ಧವಾಗಿರುವೆ. ವಿಶ್ವಕಪ್ ಆಡಲು ವಿಮಾನವೇರುವ ಆಸೆಯಂತೂ ಇದೆ’ ಎಂದರು.
‘ಆರ್‌ಸಿಬಿಯಲ್ಲಿ ಫಿನಿಷರ್ ಆಗಿ ಆಡುತ್ತಿರುವುದನ್ನು ಪೂರ್ಣವಾಗಿ ಆಸ್ವಾದಿಸುತ್ತಿದ್ದೇನೆ. ನಾನು ರಸೆಲ್ ಅಥವಾ ಪೊಲಾರ್ಡ್ ಮಾದರಿಯ ಆಟಗಾರನಲ್ಲ. ಆದರೆ ನನ್ನ ಸಾಮರ್ಥ್ಯದ ಇತಿಮಿತಿಗಳನ್ನು ಅರಿತುಕೊಂಡಿದ್ದೇನೆ. ಬೌಲರ್‌ಗಳು ಯಾವ ರೀತಿ ಎಸೆತಗಳನ್ನು ನನಗೆ ಹಾಕಬಲ್ಲರು ಎಂಬುದನ್ನು ಗ್ರಹಿಸಿ ಆಡುವ ಸಾಮರ್ಥ್ಯವಿದೆ. ಆದ್ದರಿಂದ ಬೌಂಡರಿಗೆರೆಯಾಚೆ ಚೆಂಡು ಹೊಡೆಯುವ ಆತ್ಮವಿಶ್ವಾಸ ಬೆಳೆದಿದೆ’ಎಂದು 38 ವರ್ಷದ ದಿನೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.