ಬರ್ಮಿಂಗ್‌ಹ್ಯಾಂ: ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್ ಬೂಮ್ರಾ, ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದೇ ಓವರ್‌ನಲ್ಲಿ 29 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದರು. ವೇಗದ ಬೌಲರ್ ಆಗಿರುವ ಬೂಮ್ರಾ, ಅಬ್ಬರದ ಬ್ಯಾಟಿಂಗ್ ಮೂಲಕ ದಾಖಲೆ ಮಾಡಿದ್ದು ವಿಶೇಷ.
ಇಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ನ ಎರಡನೇ ದಿನವಾದ ಶನಿವಾರ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬೌಲ್ ಮಾಡಿದ, ಭಾರತದ ಮೊದಲ ಇನಿಂಗ್ಸ್‌ನ 84ನೇ ಓವರ್‌ನಲ್ಲಿ ಈ ಸಾಧನೆ ಮೂಡಿಬಂತು.
ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಬ್ರಯನ್ ಲಾರಾ ಮತ್ತು ಆಸ್ಟ್ರೇಲಿಯಾದ ಜಾರ್ಜ್ ಬೇಯ್ಲಿ ಒಂದೇ
ಓವರ್‌ನಲ್ಲಿ 28 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಲಾರಾ 2003–04 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆ ಮಾಡಿದ್ದರು.ಇಂಗ್ಲೆಂಡ್‌ನ ವೇಗಿ ಬ್ರಾಡ್,ಒಂದೇ ಓವರ್‌ನಲ್ಲಿ 35 ರನ್ ಬಿಟ್ಟುಕೊಟ್ಟರು. ಬೂಮ್ರಾಬ್ಯಾಟ್‌ನಿಂದ ಬಂದ 29 ರನ್‌ಗಳಲ್ಲದೆ, ಐದು ವೈಡ್ ಮತ್ತು ಒಂದು ನೋಬಾಲ್ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.