ADVERTISEMENT

IND VS ENG ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅಲ್ಪ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2021, 13:08 IST
Last Updated 15 ಆಗಸ್ಟ್ 2021, 13:08 IST
ನಾಯಕ ವಿರಾಟ್‌ ಕೊಹ್ಲಿ 20 ರನ್ ಗಳಿಸಿ ಔಟಾಗಿದ್ದಾರೆ – ಎಎಫ್‌ಪಿ ಚಿತ್ರ
ನಾಯಕ ವಿರಾಟ್‌ ಕೊಹ್ಲಿ 20 ರನ್ ಗಳಿಸಿ ಔಟಾಗಿದ್ದಾರೆ – ಎಎಫ್‌ಪಿ ಚಿತ್ರ   

ಲಂಡನ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ ತಂಡವು 3 ವಿಕೆಟ್ ಕಳೆದುಕೊಂಡು 56 ರನ್‌ ಗಳಿಸಿದೆ.

ಆರಂಭಿಕ ರೋಹಿತ್‌ ಶರ್ಮಾ (21), ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಕೆ.ಎಲ್‌. ರಾಹುಲ್‌ (5) ಮತ್ತು ನಾಯಕ ವಿರಾಟ್‌ ಕೊಹ್ಲಿ (20) ಔಟಾಗಿದ್ದಾರೆ. ಚೇತೇಶ್ವರ ಪೂಜಾರ (3) ಮತ್ತು ಉಪನಾಯಕ ಅಜಿಂಕ್ಯ ರಹಾನೆ (1) ಕ್ರೀಸ್‌ನಲ್ಲಿದ್ದಾರೆ.

ಇದರೊಂದಿಗೆ ಭಾರತ ತಂಡಕ್ಕೆ 29 ರನ್‌ಗಳ ಅಲ್ಪ ಮುನ್ನಡೆ ದೊರೆತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ಮೊತ್ತ ದಾಖಲಿಸಿದ್ದ ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ ವುಡ್ ಮತ್ತು ಸ್ಯಾಮ್ ಕರ್ರನ್ ಆಘಾತ ನೀಡಿದರು.

ADVERTISEMENT

ಇಂಗ್ಲೆಂಡ್‌ ಪರ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಜೋ ರೂಟ್ ಸುಂದರ ಶತಕ (ಔಟಾಗದೆ 180; 321ಎ, 18 ಬೌಂ) ದಾಖಲಿಸಿದ್ದರು. ಪರಿಣಾಮವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 27 ರನ್‌ಗಳ ಅಲ್ಪ ಮುನ್ನಡೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.