ADVERTISEMENT

ಪೃಥ್ವಿ, ವಿಜಯ್‌ ಅರ್ಧಶತಕ

ಭಾರತ ‘ಎ’–ನ್ಯೂಜಿಲೆಂಡ್‌ ‘ಎ’ ನಡುವಣ ಮೊದಲ ‘ಟೆಸ್ಟ್‌’ ಡ್ರಾ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:54 IST
Last Updated 19 ನವೆಂಬರ್ 2018, 19:54 IST
ಮುರಳಿ ವಿಜಯ್‌
ಮುರಳಿ ವಿಜಯ್‌   

ಮೌಂಟ್‌ ಮಾಂಗಾನುಯ್‌, ನ್ಯೂಜಿಲೆಂಡ್‌: ಆರಂಭಿಕ ಆಟಗಾರರಾದ ‍ಪೃಥ್ವಿ ಶಾ (50; 53ಎ, 8ಬೌಂ, 1ಸಿ) ಮತ್ತು ಮುರಳಿ ವಿಜಯ್‌ (60; 113ಎ, 8ಬೌಂ) ಅವರು ಸೋಮವಾರ ಬೇ ಓವಲ್‌ ಮೈದಾನದಲ್ಲಿ ಅರ್ಧಶತಕಗಳ ಸಂಭ್ರಮ ಆಚರಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ (ಔಟಾಗದೆ 51; 63ಎ, 3ಬೌಂ, 3ಸಿ) ಕೂಡಾ ಮೋಡಿ ಮಾಡಿದರು.

ಹೀಗಾಗಿ ಭಾರತ ‘ಎ’ ಮತ್ತು ನ್ಯೂಜಿಲೆಂಡ್‌ ‘ಎ’ ನಡುವಣ ನಾಲ್ಕು ದಿನಗಳ ಮೊದಲ ‘ಟೆಸ್ಟ್‌’ ಪಂದ್ಯ ಡ್ರಾ ಆಯಿತು.

ಅಂತಿಮ ದಿನದಾಟದಲ್ಲಿ ಅಜಿಂಕ್ಯ ರಹಾನೆ ಬಳಗದ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟ ಆಡಿದರು. ಇದರಿಂದಾಗಿ ಪ್ರವಾಸಿ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 65 ಓವರ್‌ಗಳಲ್ಲಿ 3 ವಿಕೆಟ್‌ಗೆ 247ರನ್‌ ದಾಖಲಿಸಿತು.

ADVERTISEMENT

ಅನುಭವಿ ಆಟಗಾರ ವಿಜಯ್‌ ಮತ್ತು ಪೃಥ್ವಿ ಅವರು ಮೊದಲ ಅವಧಿಯಲ್ಲಿ ಕಿವೀಸ್‌ ನಾಡಿನ ತಂಡದ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 74ರನ್‌ ಕಲೆಹಾಕಿತು. ಡೌಗ್‌ ಬ್ರೇಸ್‌ವೆಲ್‌ ಬೌಲ್‌ ಮಾಡಿದ 18ನೇ ಓವರ್‌ನಲ್ಲಿ ಪೃಥ್ವಿ ಔಟಾದರು. ಬಳಿಕ ಕರ್ನಾಟಕದ ಮಯಂಕ್‌ ಅಗರವಾಲ್‌ (42; 70ಎ, 6ಬೌಂ, 1ಸಿ) ಮತ್ತು ವಿಜಯ್‌, ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ವಿಕೆಟ್‌ ಒಪ್ಪಿಸಿದ ನಂತರ ನಾಯಕ ಅಜಿಂಕ್ಯ ರಹಾನೆ (ಔಟಾಗದೆ 41; 94ಎ, 4ಬೌಂ) ಮತ್ತು ವಿಹಾರಿ, ಆಕರ್ಷಕ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’, ಮೊದಲ ಇನಿಂಗ್ಸ್‌: 122.1 ಓವರ್‌ಗಳಲ್ಲಿ 8 ವಿಕೆಟ್‌ಗೆ 467 ಡಿಕ್ಲೇರ್ಡ್‌ ಮತ್ತು ದ್ವಿತೀಯ ಇನಿಂಗ್ಸ್‌: 65 ಓವರ್‌ಗಳಲ್ಲಿ 3 ವಿಕೆಟ್‌ಗೆ 247 (ಪೃಥ್ವಿ ಶಾ 50, ಮುರಳಿ ವಿಜಯ್‌ 60, ಮಯಂಕ್‌ ಅಗರವಾಲ್‌ 42, ಅಜಿಂಕ್ಯ ರಹಾನೆ ಔಟಾಗದೆ 41, ಹನುಮ ವಿಹಾರಿ ಔಟಾಗದೆ 51; ಡೌಗ್‌ ಬ್ರೇಸ್‌ವೆಲ್‌ 36ಕ್ಕೆ1, ಬ್ಲೇರ್‌ ಟಿಕ್ನರ್‌ 43ಕ್ಕೆ1, ಥಿಯೊ ವ್ಯಾನ್‌ ವೊಯೆರ್ಕೊಮ್‌ 40ಕ್ಕೆ1).

ನ್ಯೂಜಿಲೆಂಡ್‌ ‘ಎ’: ಪ್ರಥಮ ಇನಿಂಗ್ಸ್‌: 134 ಓವರ್‌ಗಳಲ್ಲಿ 9 ವಿಕೆಟ್‌ಗೆ 458 ಡಿಕ್ಲೇರ್ಡ್‌.

ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.