
ಕೋಲ್ಕತ್ತ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 15 ವರ್ಷಗಳಿಂದ ಭಾರತದಲ್ಲಿ ಒಂದೂ ಟೆಸ್ಟ್ ಪಂದ್ಯ ಜಯಿಸಿಲ್ಲ. ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಜಯಿಸುವತ್ತ ತಂಡವು ಚಿತ್ತ ನೆಟ್ಟಿದೆ.
ಮೊದಲ ಪಂದ್ಯ ಈಡನ್ ಗಾರ್ಡನ್‌ನಲ್ಲಿ ಮತ್ತು ಎರಡನೇಯದ್ದು ಗುವಾಹಟಿಯಲ್ಲಿ ನಡೆಯಲಿದೆ.
‘ನಮ್ಮ ತಂಡದಲ್ಲಿ ಗೆಲ್ಲಲೇಬೇಕು ಎಂಬ ಹಸಿವು ಅಪಾರವಾಗಿದೆ. ಭಾರತ ತಂಡವನ್ನು ಅದರ ತವರಿನಲ್ಲಿಯೇ ಸೋಲಿಸುವುದು ದೊಡ್ಡ ಸಾಧನೆ. ಅದನ್ನು ಸಾಧಿಸುವ ಛಲ ನಮ್ಮಲ್ಲಿದೆ. ಭಾರತ ದಲ್ಲಿ ಟೆಸ್ಟ್ ಸರಣಿ ಆಡುವುದು ಬಹಳ ಕಠಿಣ ಸವಾಲು. ಕಳೆದ ಹಲವು ವರ್ಷಗಳಲ್ಲಿ ಇಲ್ಲಿ ಆಡಿರುವ ದಕ್ಷಿಣ ಆಫ್ರಿಕಾ ಆಟಗಾರರ ಅನುಭವವೂ ಇದೇ ಆಗಿದೆ’ ಎಂದು ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದರು.
‘ಇದು ನಮಗೆ ಬಹಳ ದೊಡ್ಡ ಟೆಸ್ಟ್ ಪಂದ್ಯವಾಗಿದೆ. ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಇದು ಉತ್ತಮ ಅವಕಾಶವಾಗಿದೆ. ಈ ಸವಾಲನ್ನು ಎದುರಿಸುವುದು ನಮಗೆ ಬಹಳ ಇಷ್ಟವಾದ ವಿಷಯವಾಗಿದೆ’ ಎಂದರು.
‘ಪಾಕಿಸ್ತಾನದಲ್ಲಿ ನಡೆದ ಸರಣಿಯಲ್ಲಿ ಆಡಿದ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿದ್ದವು. ಆದರೆ ಭಾರತದಲ್ಲಿ ಅಂತಹ ಪಿಚ್‌ಗಳನ್ನು ನಿರೀಕ್ಷಿಸುವಂತಿಲ್ಲ. ಇಲ್ಲಿ ಉತ್ತಮ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಪಂದ್ಯ ಸಾಗಿದಂತೆ ಪಿಚ್ ಬದಲಾಗುತ್ತ ಹೋಗುತ್ತದೆ. ಅದಕ್ಕೆ ತಕ್ಕಂತೆ ನಮ್ಮ ತಂತ್ರಗಾರಿಕೆ ಬದಲಿಸುತ್ತ ಹೋಗಬೇಕಾಗುತ್ತದೆ’ ಎಂದು ಅವರು ಆನ್‌ಲೈನ್ ಸಂದರ್ಶನದಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.