ವೂರ್ಸ್ಟರ್: ನಾಯಕ ಪ್ರಿಯಂ ಗರ್ಗ್ 97 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದು. ನಂತರಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಭಾರತ 19 ವರ್ಷದೊಳಗಿನವರ ತಂಡ ಏಕದಿನ ಸರಣಿಯಲ್ಲಿ ಬುಧವಾರ ಬಾಂಗ್ಲಾದೇಶ ತಂಡವನ್ನು 35 ರನ್‌ಗಳಿಂದ ಸೋಲಿಸಲು ನೆರವಾದರು. ಇದು ಮೂರು ರಾಷ್ಟ್ರಗಳ (19 ವರ್ಷದೊಳಗಿನವರ) ಸರಣಿಯಲ್ಲಿ ಭಾರತಕ್ಕೆ ಸತತ ಎರಡನೇ ಗೆಲುವು.
ಗರ್ಗ್ ಅವರ ಇನಿಂಗ್ಸ್‌ನಲ್ಲಿ ಏಳು ಬೌಂಡರಿಗಳಿದ್ದವು. ಯಶಸ್ವಿ ಜೈಸ್ವಾಲ್ ಒಂದು ಸಿಕ್ಸರ್, ಆರು ಬೌಂಡರಿಗಳಿದ್ದ 63 ರನ್ (90 ಎಸೆತ) ಗಳಿಸಿದರು. ಭಾರತ 5 ವಿಕೆಟ್‌ಗೆ 264 ರನ್ ಗಳಿಸಿತು.
ಬಾಂಗ್ಲಾದೇಶ 48ನೇ ಓವರ್‌ನ ಮೊದಲ ಎಸೆತದಲ್ಲಿ 229 ರನ್‌ಗಳಿಗೆ ಆಟ ಮುಗಿಸಿತು. ಪರ ಅಕ್ಬರ್ ಅಲಿ (56) ಮತ್ತು ಶಮೀಮ್ ಹೊಸೇನ್ (46) ಬಿಟ್ಟರೆ ಉಳಿದವರು ವಿಫಲರಾದರು. ಮಧ್ಯಮ ವೇಗಿ ಕಾರ್ತಿಕ್ ತ್ಯಾಗಿ 16 ರನ್ನಿಗೆ 4 ವಿಕೆಟ್ ಪಡೆದರೆ, ಕರ್ನಾಟಕದವರಾದ ಶುಭಾಂಗ್ ಹೆಗ್ಡೆ 59 ರನ್ನಿಗೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಮಿಂಚಿದರು.
ಭಾರತ ಕಿರಿಯರು ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮೇಲೆ ಐದು ವಿಕೆಟ್‌ಗಳ ಜಯಪಡೆದಿದ್ದರು. ಭಾರತ ಮುಂದಿನ ಪಂದ್ಯದಲ್ಲಿ ಶನಿವಾರ ಮತ್ತೆ ಬಾಂಗ್ಲಾದೇಶ ವಿರುದ್ಧ ಆಡಲಿದೆ.
ಸ್ಕೋರುಗಳು: ಭಾರತ: 50 ಓವರುಗಳಲ್ಲಿ 5 ವಿಕೆಟ್‌ಗೆ 264 (ಪ್ರಿಯಂ ಗರ್ಗ್ ಔಟಾಗದೇ 100, ಯಶಸ್ವಿ ಜೈಸ್ವಾಲ್ 63, ಮೃತ್ಯುಂಜಯ್ ಚೌಧರಿ 45ಕ್ಕೆ2); ಬಾಂಗ್ಲಾದೇಶ: 47.1 ಓವರ್‌ಗಳಲ್ಲಿ 229(ಅಕ್ಬರ್ ಅಲಿ 56, ಶಮೀಮ್ ಹೊಸೇನ್ 46; ಕಾರ್ತಿಕ್ ತ್ಯಾಗಿ 16ಕ್ಕೆ4, ಶುಭಾಂಗ್ ಹೆಗ್ಡೆ 59ಕ್ಕೆ3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.