ಕ್ರಿಸ್ ವೋಕ್ಸ್
(ಪಿಟಿಐ ಚಿತ್ರ)
ಲಂಡನ್: ಆ್ಯಂಡರ್ಸನ್– ತೆಂಡೂಲ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ತನ್ನ ಬೌಲಿಂಗ್ ವೇಳೆ ರಿಷಭ್ ಪಂತ್ ಅವರ ಪಾದಕ್ಕೆ ಗಾಯವಾಗಿರುವುದಕ್ಕೆ ಇಂಗ್ಲೆಂಡ್‌ನ ವೇಗಿ ಕ್ರಿಸ್ ವೋಕ್ಸ್ ಕ್ಷಮೆ ಕೇಳಿದ್ದಾರೆ.
ಭಾರತ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗಾಯದಿಂದಾಗಿ ಒಂಟಿಕೈಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ವೋಕ್ಸ್ ಅವರು ಕ್ರೀಡಾಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವೋಕ್ಸ್, ‘ಭಾರತ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಉಪನಾಯಕ ಪಂತ್ ನನ್ನನ್ನು ಅಭಿನಂದಿಸಿದರು. ನಿಜಕ್ಕೂ ಧೈರ್ಯಶಾಲಿ ಎಂದು ಗಿಲ್ ಪ್ರಶಂಶಿಸಿದರು. ಪಂತ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಯೂಟ್ ಇಮೋಜಿ ಹಂಚಿಕೊಂಡರು. ಅವರ ಪ್ರೀತಿಗಾಗಿಯೂ ಧನ್ಯವಾದ ಹೇಳಿದ್ದೇನೆ. ನನ್ನಿಂದಾಗಿ ಪಂತ್ ಅವರ ಕಾಲಿಗೆ ಗಾಯಗೊಂಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ’ ಎಂದು ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ವೋಕ್ಸ್ ನೆನಪಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.