ADVERTISEMENT

’ಶತಕ’ದ ಪಂದ್ಯಕ್ಕೆ ಜಯದ ರಂಗು

ಟ್ವೆಂಟಿ–20 ಕ್ರಿಕೆಟ್: ರೋಹಿತ್, ಶಿಖರ್‌ ಅಬ್ಬರದ ಆಟ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 19:05 IST
Last Updated 27 ಜೂನ್ 2018, 19:05 IST
   

ಡಬ್ಲಿನ್ (ಪಿಟಿಐ): ನೂರನೇ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಆಡಿದ ಭಾರತ ತಂಡವು ಐರ್ಲೆಂಡ್ ತಂಡದ ಎದುರು 76 ರನ್‌ಗಳಿಂದ ಗೆದ್ದಿತು.

ವಿಲೇಜ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (97 ರನ್) ಮತ್ತು ಶಿಖರ್ ಧವನ್ (74 ರನ್) ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ ವಿಕೆಟ್‌ಗಳಿಗೆ 208 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 132 ರನ್‌ ಗಳಿಸಿತು. ಭಾರತದ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮೂರು ಮತ್ತು ಕುಲದೀಪ್ ಯಾದವ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ಸ್ಕೋರು: ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 208 (ರೋಹಿತ್ ಶರ್ಮಾ 97, ಶಿಖರ್ ಧವನ್ 74. ಸುರೇಶ್ ರೈನಾ 10, ಮಹೇಂದ್ರಸಿಂಗ್ ದೋನಿ 11, ಹಾರ್ದಿಕ್ ಪಾಂಡ್ಯ 6, ಪೀಟರ್ ಚೇಸ್ 35ಕ್ಕೆ4) ಐರ್ಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 132 (ಜೇಮ್ಸ್‌ ಶಾನನ್ 60, ಕೆವಿನ್ ಓಬ್ರೇನ್ 10, ಥಾಂಪ್ಸನ್ 12, ಜಸ್‌ಪ್ರೀತ್ ಬೂಮ್ರಾ 18ಕ್ಕೆ 2, ಯಜುವೇಂದ್ರ ಚಾಹಲ್ 38ಕ್ಕೆ3, ಕುಲದೀಪ್ ಯಾದವ್ 21ಕ್ಕೆ4) ಫಲಿತಾಂಶ: ಭಾರತಕ್ಕೆ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.