ADVERTISEMENT

ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ತ್ರಿಕೋನ ಸರಣಿ

ಪಿಟಿಐ
Published 10 ನವೆಂಬರ್ 2022, 15:08 IST
Last Updated 10 ನವೆಂಬರ್ 2022, 15:08 IST
   

ಜೋಹಾನ್ಸ್‌ಬರ್ಗ್‌: ಭಾರತ ಮಹಿಳಾ ತಂಡದವರು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ಗೂ ಮುನ್ನ ತ್ರಿಕೋನ ಸರಣಿಯಲ್ಲಿ ಆಡಲಿದ್ದಾರೆ.

ವಿಶ್ವಕಪ್‌ ಟೂರ್ನಿ ಫೆ.10 ರಿಂದ 26ರ ವರೆಗೆ ಆಯೋಜನೆಯಾಗಿದೆ. ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಜ.19 ರಿಂದ ಫೆ.2ರ ವರೆಗೆ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾರತ ಅಲ್ಲದೆ, ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಪಾಲ್ಗೊಳ್ಳಲಿವೆ. ಸರಣಿಯ ಎಲ್ಲ ಪಂದ್ಯಗಳು ದಕ್ಷಿಣ ಆಫ್ರಿಕಾದ ಈಸ್ಟ್‌ ಲಂಡನ್‌ನಲ್ಲಿರುವ ಬಫೆಲೊ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರತಿ ತಂಡಗಳು ತಲಾ ಎರಡು ಸಲ ಮುಖಾಮುಖಿಯಾಗಲಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ನಲ್ಲಿ ಎದುರಾಗಲಿವೆ.

ADVERTISEMENT

ಭಾರತ ಜ.19 ರಂದು ನಡೆಯಲಿರುವ ತನ್ನ ಮೊದಲ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಆ ಬಳಿಕ ವೆಸ್ಟ್ಇಂಡೀಸ್‌ (ಜ.23), ದಕ್ಷಿಣ ಆಫ್ರಿಕಾ (ಜ.28) ಮತ್ತು ವೆಸ್ಟ್‌ ಇಂಡೀಸ್‌ (ಜ.30) ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.