ADVERTISEMENT

ನೈಟ್‌ರೈಡರ್ಸ್‌ಗೆ ಸುಲಭ ಜಯ

ಐಪಿಎಲ್‌ ಕ್ರಿಕಟ್

ಪಿಟಿಐ
Published 7 ಏಪ್ರಿಲ್ 2019, 19:59 IST
Last Updated 7 ಏಪ್ರಿಲ್ 2019, 19:59 IST
ರಾಜಸ್ಥಾನ ರಾಯಲ್ಸ್ ತಂಡದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ
ರಾಜಸ್ಥಾನ ರಾಯಲ್ಸ್ ತಂಡದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ   

ಜೈಪುರ: ಶಿಸ್ತಿನ ಬೌಲಿಂಗ್ ಮಾಡಿದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ಭಾನುವಾರ ರಾತ್ರಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಎಂಟು ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಸ್ಟೀವನ್ ಸ್ಮಿತ್ (73; 59ಎಸೆತ, 7ಬೌಂಡರಿ, 1ಸಿಕ್ಸರ್) ಅರ್ಧಶತಕದ ಬಲದಿಂದ ರಾಜಸ್ಥಾನ್ ರಾಯಲ್ಸ್‌ ತಂಡವು 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 139 ರನ್‌ ಗಳಿಸಿತು. ಕೆಕೆಆರ್ ತಂಡವು ಕ್ರಿಸ್ ಲಿನ್ (50; 32ಎ, 6ಬೌಂ, 3ಸಿ) ಮತ್ತು ಸುನಿಲ್ ನಾರಾಯಣ್ (47; 25ಎ, 6ಬೌಂ, 3ಸಿ) ಅವರ ಆಟದ ನೆರವಿನಿಂದ 13.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 140 ರನ್ ಗಳಿಸಿತು.

ADVERTISEMENT

ಸ್ಮಿತ್ ಆಟ: ಆತಿಥೆಯ ತಂಡದ ಆರಂಭ ಚೆನ್ನಾಗಿರಲಿಲ್ಲ. ಅಜಿಂಕ್ಯ ರಹಾನೆ (5 ರನ್) ಬೇಗನೆ ಔಟಾದರು. ಜೋಸ್ ಬಟ್ಲರ್ (37 ರನ್ ) ಅವರೊಂದಿಗೆ ಜೊತೆಗೂಡಿದ ಸ್ಟೀವನ್ ಸ್ಮಿತ್ ಅವರು ಇನಿಂಗ್ಸ್‌ ಕಟ್ಟಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 72 ರನ್‌ ಸೇರಿಸಿದರು. ಆದರೆ, ರನ್‌ ಗಳಿಕೆಯು ನಿಧಾನವಾಯಿತು. 12ನೇ ಓವರ್‌ನಲ್ಲಿ ಜೋಸ್ ಬಟ್ಲರ್‌ ಔಟಾದರು. ರಾಹುಲ್ ತ್ರಿಪಾಠಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಮಿತ್ ಒಬ್ಬರೇ ಏಕಾಂಗಿಯಾಗಿ ಬ್ಯಾಟ್ ಬೀಸಿದರು.

ಬೆನ್ ಸ್ಟೋಕ್ಸ್‌ (ಔಟಾಗದೆ 7; 14ಎಸೆತ) ತಾಳ್ಮೆಯಿಂದ ಆಡಿದರು. ಸ್ಮಿತ್ ಅವರಿಗೇ ಹೆಚ್ಚು ಹೊತ್ತು ಬ್ಯಾಟಿಂಗ್ ಸಿಗುವಂತೆ ನೋಡಿಕೊಂಡರು. ಆದರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.