ADVERTISEMENT

IPL 2021 | CSK vs RCB: ಜಡೇಜ ಮಿಂಚು; ಗೆದ್ದು ಬೀಗಿದ್ದ ಆರ್‌ಸಿಬಿಗೆ ಸೋಲಿನ ಶಾಕ್ ಕೊಟ್ಟ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 69 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ರವೀಂದ್ರ ಜಡೇಜ, ಚೆನ್ನೈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ ಅಜೇಯ ಓಟ ಮುಂದುವರಿಸಿದ್ದ ಆರ್‌ಸಿಬಿಗೆ ಮೊದಲ ಸೋಲಿನ ಶಾಕ್ ನೀಡಿದೆ.

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 16:20 IST
Last Updated 25 ಏಪ್ರಿಲ್ 2021, 16:20 IST

ಆರ್‌ಸಿಬಿಗೆ ಮೊದಲ ಸೋಲಿನ ಪೆಟ್ಟು ಕೊಟ್ಟ ಜಡೇಜ

ಜಡೇಜ vs ಆರ್‌ಸಿಬಿ

ಜಡೇಜಗೆ ಫುಲ್ ಮಾರ್ಕ್ಸ್ ಕೊಟ್ಟ ಕೊಹ್ಲಿ

ಸರ್. ಜಡೇಜ ಮ್ಯಾಜಿಕ್, ಚೆನ್ನೈ ವಿಜಯೋತ್ಸವ

ಆರ್‌ಸಿಬಿಗೆ ಹೀನಾಯ ಸೋಲಿನ ಮುಖಭಂಗ

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ನಂಬಲಾಗದ ರೀತಿಯ ಪ್ರದರ್ಶನ ನೀಡಿದ ಜಡೇಜ

ಚೆನ್ನೈಗೆ 69 ರನ್ ಅಂತರದ ಬೃಹತ್ ಗೆಲುವು

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಸೇರಿದಂತೆ ಕ್ರಿಕೆಟ್‌ನ ಎಲ್ಲ ಮೂರು ವಿಭಾಗಗಳಲ್ಲೂ ನಂಬಲಾಗದ ರೀತಿಯ ಆಲ್‌ರೌಂಡರ್ ಪ್ರದರ್ಶನ ನೀಡಿರುವ ರವೀಂದ್ರ ಜಡೇಜ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ 69 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಇದರೊಂದಿಗೆ ಸತತ ನಾಲ್ಕು ಗೆಲುವುಗಳೊಂದಿಗೆ ಅಜೇಯ ಓಟ ಮುಂದುವರಿಸಿದ್ದ ವಿರಾಟ್ ಕೊಹ್ಲಿ ಪಡೆಗೆ ಟೂರ್ನಿಯಲ್ಲಿ ಮೊದಲ ಸೋಲಿನ ಶಾಕ್ ನೀಡಿದೆ. ಅಷ್ಟೇ ಯಾಕೆ ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿದ ಮಹೇಂದ್ರ ಸಿಂಗ್ ಧೋನಿ ಬಳಗವು ಅಗ್ರಸ್ಥಾನಕ್ಕೇರಿದೆ. 

ಮೊದಲು ಬ್ಯಾಟಿಂಗ್‌ನಲ್ಲಿ ಕೇವಲ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ ಅಜೇಯ 62 ರನ್ ಗಳಿಸಿದ ಜಡೇಜ, ಚೆನ್ನೈ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಐದು ಸಿಕ್ಸರ್ ಸೇರಿದಂತೆ ಒಟ್ಟು 37 ರನ್ ಚಚ್ಚಿದ್ದರು. 

ADVERTISEMENT

ಬಳಿಕ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಹಾಗೂ ಒಂದು ರನೌಟ್ ಮಾಡಿದ ಜಡೇಜ, ಆರ್‌ಸಿಬಿ ತಂಡವನ್ನು 122 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ನೆರವಾದರು. ಈ ಮೂಲಕ ಚೆನ್ನೈ ತಂಡದ ಸತತ ನಾಲ್ಕನೇ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.  

ತಾಹೀರ್ ದಾಳಿಯಲ್ಲಿ ರೈನಾ ಅತ್ಯುತ್ತಮ ಕ್ಯಾಚ್

ತಾಹೀರ್ ಸೆಲೆಬ್ರೇಷನ್

ವಿಲಿಯರ್ಸ್ ಕ್ಲೀನ್ ಬೌಲ್ಡ್ ಮಾಡಿದ ಜಡೇಜ

ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್ ಮಾಡಿದ ಜಡೇಜ

ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಜಡ್ಡು ಕಮಾಲ್

ಬೌಲಿಂಗ್‌ನಲ್ಲೂ ಮಿಂಚಿದ ಜಡೇಜ

ವಾಷಿಂಗ್ಟನ್ ಸುಂದರ್ (7) ಅವರಿಂದಲೂ ಹೆಚ್ಚೇನು ಮಾಡಲಾಗಲಿಲ್ಲ. ಉತ್ತಮವಾಗಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ (22) ಅವರನ್ನು ರವೀಂದ್ರ ಜಡೇಜ ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಬೌಲಿಂಗ್‌ನಲ್ಲೂ ಮಿಂಚಿದರು. ಈ ವೇಳೆಗೆ 8.5 ಓವರ್‌ಗಳಲ್ಲಿ 79 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು.

ಜಡೇಜ ಮಿಂಚು

ಪಡಿಕ್ಕಲ್ ಹೊರದಬ್ಬಿದ ಶಾರ್ದೂಲ್

ಮಿಸ್ ಮಾಡದಿರಿ

ಚೆನ್ನೈ ಸಂಭ್ರಮ

ಹೆಚ್ಚು ಹೊತ್ತು ನಿಲ್ಲದ ಪಡಿಕ್ಕಲ್

ಪಡಿಕ್ಕಲ್ ಅಬ್ಬರ, ನಾಯಕ ಕೊಹ್ಲಿ ಫೇಲ್

ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ಕಳೆದ ಪಂದ್ಯದ ಶತಕವೀರ ದೇವದತ್ತ ಪಡಿಕ್ಕಲ್ ಬಿರುಸಿನ ಆರಂಭವೊದಗಿಸಿದರು. ಆದರೆ ನಾಯಕ ವಿರಾಟ್ ಕೊಹ್ಲಿ (8) ಅವರಿಂದ ಉತ್ತಮ ಬೆಂಬಲ ಸಿಗಲಿಲ್ಲ. 

ಹರ್ಷಲ್ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸಿಡಿಸಿದ ಜಡೇಜ ದಾಖಲೆ

6, 6, 6+Nb, 6, 2, 6, 4 : ಅಂತಿಮ ಓವರ್‌ನಲ್ಲಿ 37 ರನ್ ಚಚ್ಚಿದ ಜಡ್ಡು

ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿದ ಜಡ್ಡು

25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಜಡೇಜ

ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕವಾಡ್ ಅರ್ಧಶತಕದ ಜೊತೆಯಾಟ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜ ಬಿರುಸಿನ ಆಟದ ನೆರವಿನೊಂದಿಗೆ ಮೊದಲು ಬ್ಯಾಟಿಂಗ್ ನಡೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 

ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಜಡೇಜ ಅಬ್ಬರಿಸಿದರು. ಆರ್‌ಸಿಬಿ ವೇಗದ ಬೌಲರ್ ಹರ್ಷಲ್ ಪಟೇಲ್ ಮೊದಲಿಗೆ ಮೂರು ವಿಕೆಟ್ ಕಬಳಿಸಿದರೂ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 37 ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದರು. ಈ ಓವರ್‌ನಲ್ಲಿ ಜಡೇಜ ಸತತ ನಾಲ್ಕು ಸೇರಿದಂತೆ ಒಟ್ಟು ಐದು ಸಿಕ್ಸರ್‌ಗಳನ್ನು ಚಚ್ಚಿದ್ದರು. 

ಕೇವಲ 28 ಎಸೆತಗಳನ್ನು ಎದುರಿಸಿದ ಜಡೇಜ ನಾಲ್ಕು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 62 ರನ್ ಗಳಿಸಿ ಅಜೇಯರಾಗುಳಿದರು. 

ಜಡೇಜ ಕ್ಯಾಚ್ ಕೈಚೆಲ್ಲಿದ ಕ್ರಿಸ್ಟಿಯನ್

ಹರ್ಷಲ್ ಪಟೇಲ್ ಅದ್ಭುತ ಬೌಲಿಂಗ್

ಸುರೇಶ್ ರೈನಾ ಐಪಿಎಲ್‌ನಲ್ಲಿ 200 ಸಿಕ್ಸರ್ ಸಿಡಿಸಿದ 7ನೇ ಆಟಗಾರ

ಹರ್ಷಲ್ ಮಿಂಚಿನ ದಾಳಿ, ತಿರುಗೇಟು ನೀಡಿದ ಆರ್‌ಸಿಬಿ

ಈ ಹಂತದಲ್ಲಿ ದಾಳಿಗಿಳಿದ ಹರ್ಷಲ್ ಪಟೇಲ್, ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಸೆಟ್ ಬ್ಯಾಟ್‌ಮನ್‌ಗಳಾದ ಸುರೇಶ್ ರೈನಾ (24) ಹಾಗೂ ಫಫ್ ಡುಪ್ಲೆಸಿ (50) ಅವರನ್ನು ಹೊರದಬ್ಬುವ ಮೂಲಕ ಡಬಲ್ ಆಘಾತ ನೀಡಿದರು. ಈ ಮೂಲಕ ಪಂದ್ಯದಲ್ಲಿ ಆರ್‌ಸಿಬಿ ತಿರುಗೇಟು ನೀಡಲು ನೆರವಾದರು. ಈ ವೇಳೆಗೆ ಚೆನ್ನೈ 13.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತ್ತು.  

ಫಫ್ ಫಿಫ್ಟಿ ಸಾಧನೆ

ರೈನಾ ಮೈಲಿಗಲ್ಲು - ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳ ಸರದಾರ

ಕೋವಿಡ್ ತಡೆಗಟ್ಟಲು ವಿಶೇಷ ಸಂದೇಶ ಹಂಚಿದ ಆರ್‌ಸಿಬಿ ಆಟಗಾರರು

ಚಹಲ್‌ಗೆ ಮೊದಲ ಯಶಸ್ಸು

ಮೊದಲ ವಿಕೆಟ್‌ಗೆ 74 ರನ್ ಜೊತೆಯಾಟ

ಕೊನೆಗೂ ಉತ್ತಮವಾಗಿ ಆಡುತ್ತಿದ್ದ ಋತುರಾಜ್ ಗಾಯಕವಾಡ್ (33) ಹೊರದಬ್ಬುವಲ್ಲಿ ಯಜುವೇಂದ್ರ ಚಾಹಲ್ ಯಶಸ್ವಿಯಾದರು. ಇದರೊಂದಿಗೆ ಚೆನ್ನೈ ಮೊದಲ ವಿಕೆಟ್ ಪತನವಾಯಿತು. 10 ಓವರ್ ಅಂತ್ಯಕ್ಕೆ ಸಿಎಸ್‌ಕೆ ಒಂದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು. 

ಚೆನ್ನೈ ಉತ್ತಮ ಆರಂಭ

ಚೆನ್ನೈ ಬಿರುಸಿನ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಫಫ್ ಡುಪ್ಲೆಸಿ ಹಾಗೂ ಋತುರಾಜ್ ಗಾಯಕವಾಡ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಆರ್‌ಸಿಬಿ ಬೌಲರ್‌ಗಳನ್ನುಸಮರ್ಥವಾಗಿ ಎದುರಿಸಿದರು. 

ಮಹಿಗೆ ಕೊಹ್ಲಿ ಅಪ್ಪುಗೆ

ಅಂಕಪಟ್ಟಿಯಲ್ಲಿ ಎರಡು ಅಗ್ರ ತಂಡಗಳ ನಡುವೆ ಕದನ

ಹೈ ವೋಲ್ಟೇಜ್ ಕದನ

ಬಲಾಬಲ ಇಂತಿದೆ

ಇತ್ತಂಡಗಳಲ್ಲೂ ಬದಲಾವಣೆ

ಟಾಸ್ ಝಲಕ್

ಟಾಸ್ ಗೆದ್ದ ಮಹಿ ಬ್ಯಾಟಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.  

ಚೆನ್ನೈ ಆಟಗಾರರ ಸಂದೇಶ

ಧೋನಿ ತಯಾರಿ ನೋಡಿ

ಚೆನ್ನೈ ತಯಾರಿ

ಕೊಹ್ಲಿ vs ಧೋನಿ

ಸೂಪರ್ ಸಂಡೇ ಕದನ

ವಿರಾಟ್ ಕೊಹ್ಲಿ ಸಂದೇಶ

ಸಿಎಸ್‌ಕೆ ವಿರುದ್ಧ ಅತ್ಯಧಿಕ ರನ್ ಸರದಾರ

ದಾಖಲೆ ಸನಿಹದಲ್ಲಿ ಮ್ಯಾಕ್ಸ್‌ವೆಲ್

ಸಿಎಸ್‌ಕೆ ವಿರುದ್ಧ ಗರಿಷ್ಠ ಸಿಕ್ಸರ್ ದಾಖಲೆ

ಸದರ್ನ್ ಡರ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.