ADVERTISEMENT

IPL 2021 | DC vs PBKS: ಗಬ್ಬರ್ ಅಬ್ಬರ; ಗೆಲುವಿನ ಶಿಖರವನ್ನೇರಿದ ಡೆಲ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮುಂಬೈನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 92 ರನ್ ಗಳಿಸಿದ ಶಿಖರ್ ಧವನ್ ಪಂದ್ಯದ ಹೀರೊ ಎಂದೆನಿಸಿದರು.

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 18:05 IST
Last Updated 18 ಏಪ್ರಿಲ್ 2021, 18:05 IST

ಗೆಲುವಿನ ಹಾದಿಗೆ ಮರಳಿದ ಡೆಲ್ಲಿ

ಧವನ್ 92; ಪಂಜಾಬ್ ಮೇಲೆ ಸವಾರಿ ಮಾಡಿದ ಡೆಲ್ಲಿ

ಡೆಲ್ಲಿಗೆ ಆರು ವಿಕೆಟ್ ಅಂತರದ ಭರ್ಜರಿ ಗೆಲುವು

'ಗಬ್ಬರ್' ಖ್ಯಾತಿಯ ಶಿಖರ್ ಧವನ್ (92) ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಇದರೊಂದಿಗೆ ರಿಷಭ್ ಪಂತ್ ಬಳಗ ಗೆಲುವಿನ ಹಾದಿಗೆ ಮರಳಿದೆ. ಅತ್ತ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ (61) ಹಾಗೂ ಮಯಂಕ್ ಅಗರವಾಲ್ (69) ಹೋರಾಟವು ವ್ಯರ್ಥವೆನಿಸಿದೆ. 

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ನಾಲ್ಕು ವಿಕೆಟ್ ನಷ್ಟಕ್ಕೆ 195 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಧವನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.2 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ADVERTISEMENT

ಶಮಿ ಒಂದೇ ಓವರ್‌ನಲ್ಲಿ 20 ರನ್

ಮೊಹಮ್ಮದ್ ಶಮಿ ಅವರ ಒಂದೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯಿನಿಸ್ 20 ರನ್ ಚಚ್ಚಿದರು.  

ಧವನ್‌ಗೆ 8 ರನ್ ಅಂತರದಲ್ಲಿ ಶತಕ್ ಮಿಸ್

ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ ಬೇಕು 44 ರನ್

ಅಂತಿಮ ಐದು ಓವರ್‌ಗಳಲ್ಲಿ ಡೆಲ್ಲಿ ಗೆಲುವಿಗೆ 44 ರನ್‌ಗಳು ಬೇಕಾಗಿದ್ದವು. 

ಗಬ್ಬರ್‌ಗೆ ಶತಕ ಮಿಸ್

ಅರ್ಧಶತಕದ ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಿಖರ್ ಧವನ್, ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿ ಎಡವಿದರು. 49 ಎಸೆತಗಳಲ್ಲಿ 92 ರನ್ ಗಳಿಸಿದ ಧವನ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. 

ಪಂಜಾಬ್ ಇನ್ನಿಂಗ್ಸ್ ವರದಿ ಓದಿ

ಡೆಲ್ಲಿ ಪರ ಪದಾರ್ಪಣೆ ಪಂದ್ಯದಲ್ಲಿ ನಿರಾಸೆ ಮೂಡಿಸಿದ ಸ್ಮಿತ್

ಡೆಲ್ಲಿ ಕ್ಯಾಪಿಟಲ್ಸ್ ಪರ ಚೊಚ್ಚಲ ಪಂದ್ಯವನ್ನಾಡಿದ ಸ್ಟೀವನ್ ಸ್ಮಿತ್ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 

ಧವನ್ ಅಮೋಘ ಆಟ

ಧವನ್ ಫಿಫ್ಟಿ, 10 ಓವರ್ ಅಂತ್ಯಕ್ಕೆ ಡೆಲ್ಲಿ 99/1

ಮಗದೊಂದು ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಶಿಖರ್ ಧವನ್ ಕೇವಲ 31 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಇದರೊಂದಿಗೆ ಡೆಲ್ಲಿ ತಂಡವು 10 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತ್ತು. ಅಲ್ಲದೆ ಕೊನೆಯ 60 ಎಸೆತಗಳಲ್ಲಿ ಗೆಲುವಿಗೆ 97 ರನ್‌ಗಳ ಅವಶ್ಯಕತೆಯಿತ್ತು. 

ಪೃಥ್ವಿ ವಿಕೆಟ್ ಪತನ

ಧವನ್-ಪೃಥ್ವಿ ಬಿರುಸಿನ ಆರಂಭ

ಪೃಥ್ವಿ-ಧವನ್ ಅರ್ಧಶತಕದ ಜೊತೆಯಾಟ

ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲೇ 59 ರನ್‌ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪೃಥ್ವಿ ಕೇವಲ 17 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 32 ರನ್ ಚಚ್ಚಿದರು. 

ಕೊನೆಯ ಹಂತದಲ್ಲಿ ಮಿಂಚಿದ ದೀಪಕ್ ಹೂಡಾ, ಶಾರೂಕ್ ಖಾನ್

ಡೆಲ್ಲಿ ಗೆಲುವಿಗೆ 196 ರನ್ ಗುರಿ

ಮಯಂಕ್ ಅಗರವಾಲ್ (69) ಹಾಗೂ ನಾಯಕ ಕೆ.ಎಲ್. ರಾಹುಲ್ (61)ಆಕರ್ಷಕ ಅರ್ಧಶತಕಗಳ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿರುವ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 195 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 

ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಮಯಂಕ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಅಲ್ಲದೆ ನಾಯಕ ರಾಹುಲ್ ಜೊತೆಗೆ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲೇ 122 ರನ್ ಜೊತೆಯಾಟದಲ್ಲಿ ಭಾಗಿಯಾದರು. 

ಸದ್ದು ಮಾಡದ ಗೇಲ್

9 ಎಸೆತಗಳನ್ನು ಎದುರಿಸಿದ ಕ್ರಿಸ್ ಗೇಲ್ ಒಂದು ಸಿಕ್ಸರ್ ನೆರವಿನಿಂದ 11 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದರಿಂದಾಗಿ ಅಂತಿಮ ಹಂತದಲ್ಲಿ ಪಂಜಾಬ್ ಕಿಂಗ್ಸ್ ಹಿನ್ನೆಡೆ ಅನುಭವಿಸಿತು. 

ಅರ್ಧಶತಕದ ಬಳಿಕ ರಾಹುಲ್ ವಿಕೆಟ್ ಪತನ

ಅರ್ಧಶತಕದ ಬಳಿಕ ನಾಯಕ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು. 51 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. 

ರಾಹುಲ್ ನಾಯಕನ ಆಟ, ಅರ್ಧಶತಕ ಸಾಧನೆ

ಮಯಂಕ್ ಸಿಡಿಲಬ್ಬರದ ಇನ್ನಿಂಗ್ಸ್‌ಗೆ ತೆರೆ

ಕೊನೆಗೂ ಪದಾರ್ಪಣೆ ವೇಗಿ ಲುಕ್ಮಾನ್ ಮೇರಿವಾಲಾ ದಾಳಿಯಲ್ಲಿ ಮಯಂಕ್ ವಿಕೆಟ್ ಒಪ್ಪಿಸಿದರು. ಆಗಲೇ ರಾಹುಲ್ ಜೊತೆ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 122 ರನ್‌ಗಳ ಜೊತೆಯಾಟ ನೀಡಿದ್ದರು. ಕೇವಲ 36 ಎಸೆತಗಳನ್ನು ಎದುರಿಸಿದ ಮಯಂಕ್, ಏಳು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 69 ರನ್ ಗಳಿಸಿದರು. 

ವಾಂಖೆಡೆಯಲ್ಲಿ ಮಯಂಕ್ ಅಬ್ಬರ

ರಬಡ ಓವರ್‌ನಲ್ಲಿ 6,6,6

ವಿಶ್ವದ ಅಗ್ರ ಬೌಲರ್ ಕಗಿಸೋ ರಬಡ ಓವರ್‌ವೊಂದರಲ್ಲಿ ಮಯಂಕ್ ಹಾಗೂ ರಾಹುಲ್ ಮೂರು ಸಿಕ್ಸರ್‌ಗಳನ್ನು ಚಚ್ಚಿದರು. 

ಫಾರ್ಮ್‌ಗೆ ಮರಳಿದ ಮಯಂಕ್

10 ಓವರ್ ಅಂತ್ಯಕ್ಕೆ ಡೆಲ್ಲಿ 94/0

ಕೇವಲ 25 ಎಸೆತಗಳಲ್ಲಿ ಮಯಂಕ್ ಅರ್ಧಶತಕ ಸಾಧನೆ ಮಾಡಿದರು. ಇವರಿಗೆ ನಾಯಕ ರಾಹುಲ್ ಅವರಿಂದಲೂ ಉತ್ತಮ ಸಾಥ್ ದೊರಕಿತು. ಈ ಮೂಲಕ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 94 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. 

ಪವರ್ ಪ್ಲೇನಲ್ಲಿ ಪವರ್‌ಫುಲ್ ಬ್ಯಾಟಿಂಗ್

ಮಯಂಕ್-ರಾಹುಲ್ ಸ್ಫೋಟಕ ಬ್ಯಾಟಿಂಗ್

ನಾಯಕ ಕೆಎಲ್ ರಾಹುಲ್ ಹಾಗೂ ಮಯಂಕ್ ಅಗರವಾಲ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ ಪಂಜಾಬ್ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿತ್ತು. 

ಪದಾರ್ಪಣೆ ಪಂದ್ಯದಲ್ಲಿ ದುಬಾರಿಯೆನಿಸಿದ ಲುಕ್ಮಾನ್ ಮೇರಿವಾಲಾ

ಮೊದಲ ಪಂದ್ಯ ಆಡುತ್ತಿರುವ ಲುಕ್ಮಾನ್ ಮೇರಿವಾಲಾ ಮೊದಲ ಓವರ್‌ನಲ್ಲೇ ರಾಹುಲ್ ಹಾಗೂ ಮಯಂಕ್ ಜೋಡಿಯು 20 ರನ್ ಚಚ್ಚಿದರು. 

ಲಯಕ್ಕೆ ಮರಳಿದ ಮಯಂಕ್, ರಾಹುಲ್

ಪಂಜಾಬ್ ತಂಡದ ಪರ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಂಕ್ ಅಗರವಾಲ್ ಬಿರುಸಿನ ಆರಂಭವೊದಗಿಸಿದರು. ಮೊದಲೆರಡು ಪಂದ್ಯಗಳಲ್ಲಿ ಮಯಂಕ್ ವೈಫಲ್ಯ ಅನುಭವಿಸಿದ್ದರು. 

ಆಡುವ ಬಳಗ ಇಂತಿದೆ:

ಆಕಾಶಕ್ಕೆ ಚಿಮ್ಮಿದ ನಾಣ್ಯ

ಆಡುವ ಬಳಗ ಇಂತಿದೆ:

ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮುಂಬೈನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಡೆಲ್ಲಿ ಪರ ಕ್ಯಾಪ್ ಧರಿಸಿದ ಸ್ಮಿತ್

ಪಂಜಾಬ್ ಪರ ಜಲಜ್ ಸಕ್ಸೇನಾ ಪದಾರ್ಪಣೆ

ತಂಡಗಳ ಬಲಾಬಲ

ರಿಷಭ್ ಪಂತ್ ಬಳಗಕ್ಕೆ ನಾರ್ಕಿಯ ಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.