ADVERTISEMENT

IPL 2021 LIVE | RR vs SRH: ಬಟ್ಲರ್ ಸೆಂಚುರಿ ಬ್ಲಾಸ್ಟ್; ಸನ್‌ರೈಸರ್ಸ್ ಉಡೀಸ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನವದೆಹಲಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 55 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಜೋಸ್ ಬಟ್ಲರ್, ರಾಜಸ್ಥಾನ್ ಗೆಲುವಿನ ರೂವಾರಿಯೆನಿಸಿದರು.

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:12 IST
Last Updated 2 ಮೇ 2021, 14:12 IST

ವಾರ್ನರ್ ಕೈಬಿಟ್ಟಿದ್ದು ಸರಿಯೇ?

ರಾಜಸ್ಥಾನ್ ವಿಜಯೋತ್ಸವ

ರಾಜಸ್ಥಾನ್‌ಗೆ 55 ರನ್ ಅಂತರದ ಭರ್ಜರಿ ಗೆಲುವು

ಓಪನರ್ ಜೋಸ್ ಬಟ್ಲರ್ ಭರ್ಜರಿ ಶತಕದ (124) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 55 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಸಂಜು ಸ್ಯಾಮ್ಸನ್ ಪಡೆ ಗೆಲುವಿನ ಹಾದಿಗೆ ಮರಳಿದೆ. ಅಲ್ಲದೆ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಒಟ್ಟು ಆರು ಅಂಕಗಳನ್ನು ಸಂಪಾದಿಸಿದೆ. 

ಅತ್ತ ನಾಯಕತ್ವ ಬದಲಾದರೂ ಹೈದರಾಬಾದ್ ಅದೃಷ್ಟ ಮಾತ್ರ ಬದಲಾಗಲಿಲ್ಲ. ಅಷ್ಟೇ ಪಂದ್ಯಗಳಲ್ಲಿ ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ. 

ADVERTISEMENT

ಬಟ್ಲರ್ ಹಾಗೂ ಸಂಜು 150 ರನ್‌ಗಳ ಅಮೋಘ ಜೊತೆಯಾಟದ ನೆರವಿನಿಂದ ರಾಜಸ್ಥಾನ್ 220 ರನ್‌ಗಳ ಬೃಹತ್ ಗುರಿ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಯಾವ ಹಂತಲ್ಲೂ ಸವಾಲೊಡ್ಡಲಿಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಹೈದರಾಬಾದ್‌ಗೆ ಓಪನರ್‌ಗಳಾದ ಜಾನಿ ಬೆಸ್ಟ್ ಹಾಗೂ ಮನೀಶ್ ಪಾಂಡೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು. ಆ ಈ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಹಿನ್ನೆಡೆ ಅನುಭವಿಸಿತು. 

ನಾಯಕ ಕೇನ್ ವಿಲಿಯಮ್ಸನ್ (20) ಹಾಗೂ ವಿಜಯ್ ಶಂಕರ್ (8) ನಿರಾಸೆ ಮೂಡಿಸಿದರು. ಮೊಹಮ್ಮದ್ ನಬಿ ಕೂಡಾ ಪೆವಿಲಿಯನ್ ಸೇರುವುದರೊಂದಿಗೆ 127 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಲ್ಲಿಂದ ಬಳಿಕವೂ ಚೇತರಿಸಿಕೊಳ್ಳಲಿಲ್ಲ. 

ಕೇದಾರ್ ಜಾಧವ್ (19), ಮೊಹಮ್ಮದ್ ನಬಿ (17), ಅಬ್ದುಲ್ ಸಮದ್ (10), ಭುವನೇಶ್ವರ್ ಕುಮಾರ್ (14*) ಸಂದೀಪ್ ಶರ್ಮಾ (8*) ಹಾಗೂ ರಶೀದ್ ಖಾನ್ (0) ರನ್ ಗಳಿಸಿದರು. ರಾಜಸ್ಥಾನ್ ಪರ ಮುಸ್ತಾಫಿಜುರ್ ರೆಹಮಾನ್ ಹಾಗೂ ಕ್ರಿಸ್ ಮೊರಿಸ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು. 

ಗೆಲುವಿನತ್ತ ರಾಜಸ್ಥಾನ್

ರಾಜಸ್ಥಾನ್ ಹಿಡಿತದಲ್ಲಿ ಪಂದ್ಯ

ರಾಜಸ್ಥಾನ್ ಬೌಲರ್‌ಗಳ ಮೇಲುಗೈ

ಬೃಹತ್ ಮೊತ್ತ ಬೆನ್ನತ್ತಿದ ಹೈದರಾಬಾದ್‌ಗೆ ಓಪನರ್‌ಗಳಾದ ಜಾನಿ ಬೆಸ್ಟ್ ಹಾಗೂ ಮನೀಶ್ ಪಾಂಡೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು. ಆ ಈ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಹಿನ್ನೆಡೆ ಅನುಭವಿಸಿತು. 

ನಾಯಕ ಕೇನ್ ವಿಲಿಯಮ್ಸನ್ (20) ಹಾಗೂ ವಿಜಯ್ ಶಂಕರ್ (8) ನಿರಾಸೆ ಮೂಡಿಸಿದರು. ಪರಿಣಾಮ 105 ರನ್ನಿಗೆ ಐದು ವಿಕೆಟ್ ಪತನಗೊಂಡಿತ್ತು. 

ಮೊರಿಸ್ ಸಂಭ್ರಮ

ರಾಜಸ್ಥಾನ್ ತಿರುಗೇಟು

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿರುವ ರಾಹುಲ್

ಬೆಸ್ಟೊ-ಪಾಂಡೆ ಫಿಫ್ಟಿ ಜೊತೆಯಾಟ

ಬಟ್ಲರ್ ಐಪಿಎಲ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ನ 4ನೇ ಬ್ಯಾಟ್ಸ್‌ಮನ್

ಬಟ್ಲರ್-ಸಂಜು ಅಬ್ಬರ

ಐಪಿಎಲ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಬಟ್ಲರ್

ಜೋಸ್ ಬಟ್ಲರ್ ಚೊಚ್ಚಲ ಶತಕ ಸಾಧನೆ (124) ಹಾಗೂ ನಾಯಕ ಸಂಜು ಸ್ಯಾಮ್ಸನ್ (48) ಬಿರುಸಿನ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್, ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೂರು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 

ಬಟ್ಲರ್ ಅಮೋಘ ಶತಕ

ಶತಕದತ್ತ ಬಟ್ಲರ್

ಬಟ್ಲರ್-ಸಂಜು ಅಮೋಘ ಆಟ

ಬಟ್ಲರ್ ಸಮಯೋಚಿತ ಫಿಫ್ಟಿ

ಸ್ಯಾಮ್ಸನ್ ಕ್ಯಾಚ್ ಕೈಚೆಲ್ಲಿದ ಮನೀಶ್

ಬಟ್ಲರ್-ಸಂಜು ಆಸರೆ

ಯಶಸ್ವಿ ಜೈಸ್ವಾಲ್ (12) ರೂಪದಲ್ಲಿ ರಾಜಸ್ಥಾನಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದರು. 11 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು.

ಬಟ್ಲರ್ ಶೋ

ಮೊದಲ ಎಸೆತವನ್ನು ಸಿಕ್ಸರ್‌ಗಟ್ಟಿದ ಸಂಜು

ಹೈದರಾಬಾದ್‌ಗೆ ಮೊದಲ ಯಶಸ್ಸು

ಹೈದರಾಬಾದ್‌ಗೆ ಹೊಸ ನಾಯಕ

ವಾರ್ನರ್ ಬಗ್ಗೆ ಟಾಮ್ ಮೂಡಿ ಸ್ಪಷ್ಟನೆ

ಹೈದರಾಬಾದ್ ತಂಡದಿಂದ ವಾರ್ನರ್ ಔಟ್

ಆಕಾಶಕ್ಕೆ ಚಿಮ್ಮಿದ ನಾಣ್ಯ

ರಾಜಸ್ಥಾನ್ ಪರ ಅನೂಜ್ ರಾವತ್ ಪದಾರ್ಪಣೆ

ಹೊಸ ಹುರುಪಿನೊಂದಿಗೆ ಹೈದರಾಬಾದ್ ರೆಡಿ

ರಾಜಸ್ಥಾನ್ ತಯಾರಿ

ಟಾಸ್ ಗೆದ್ದ ಎಸ್‌ಆರ್‌ಎಚ್ ನಾಯಕ ಕೇನ್ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನವದೆಹಲಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೂಂಡಿದ್ದಾರೆ. 

ಸಂಗಾ vs ಮುರಳಿ

ಹೈದರಾಬಾದ್‌ಗೆ ನೂತನ ನಾಯಕ - ಕೇನ್ ವಿಲಿಯಮ್ಸನ್

ವಾರ್ನರ್ ಎಡಗೈ ಸ್ಪಿನ್ ದಾಳಿ

ವಿಲಿಯಮ್ಸನ್‌ಗೆ ಹೈದರಾಬಾದ್ ನಾಯಕ ಪಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.