ADVERTISEMENT

IPL–2020 | RR vs KKR: ರಾಯಲ್ಸ್‌ ವಿರುದ್ಧ ಕೆಕೆಆರ್‌ಗೆ 37 ರನ್‌ ಗೆಲುವು

ಐಪಿಎಲ್‌ 2020ರ 12ನೇ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ ನೇತೃತ್ವದ ರಾಜಸ್ಥಾನ್‌ ರಾಯಲ್ಸ್‌ ತಂಡವು ದಿನೇಶ್‌ ಕಾರ್ತಿಕ್‌ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 18:05 IST
Last Updated 30 ಸೆಪ್ಟೆಂಬರ್ 2020, 18:05 IST

ರಾಯಲ್ಸ್‌ ವಿರುದ್ಧ ಕೆಕೆಆರ್‌ಗೆ ಜಯ

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕೋಲ್ಕತ್ತ ನೈಟ್‌ ರೈಡರ್ಸ್‌ ವಿಕೆಟ್‌ 37 ರನ್‌ ಅಂತರದಿಂದ ಗೆಲುವು ಸಾಧಿಸಿದೆ.

15 ಓವರ್‌ಗಳ ಅಂತ್ಯಕ್ಕೆ 90 ರನ್‌ ಗಳಿಸಿದ ರಾಯಲ್ಸ್‌

ರಾಜಸ್ಥಾನ್‌ ರಾಯಲ್ಸ್‌ ತಂಡ 15 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 90 ರನ್‌ ಗಳಿಸಿದೆ.

ಜೋಫ್ರಾ ಆರ್ಚರ್‌ ಔಟ್‌

ಶ್ರೇಯಸ್ ಗೋಪಾಲ್‌ ಔಟ್‌

ರಾಹುಲ್‌ ತವಾಟಿಯಾ ಔಟ್‌

ರಾಹುಲ್‌ ತವಾಟಿಯಾ 14 ರನ್‌ ಗಳಿಸುವಷ್ಟರಲ್ಲಿ ವರುಣ್‌ ಚಕ್ರವರ್ತಿ ಪೆವಿಲಿಯನ್‌ ದಾರಿ ತೋರಿಸಿದರು.

ADVERTISEMENT

ರಾಜಸ್ಥಾನ್‌ ರಾಯಲ್ಸ್‌ 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 61 ರನ್‌ ಗಳಿಸಿದೆ.

ರಾಜಸ್ಥಾನ್‌ ರಾಯಲ್ಸ್‌ ತಂಡ 9 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 50 ರನ್‌ ಗಳಿಸಿದೆ.

ರಾಬಿನ್‌ ಉತ್ತಪ್ಪ ಔಟ್‌

ರಾಬಿನ್‌ ಉತ್ತಪ್ಪ 2 ರನ್‌ ಗಳಿಸುವಷ್ಟರಲ್ಲಿ ಕಮಲೇಶ್‌ ನಗರ್‌ಕೋಟಿ ಕಟ್ಟಿಹಾಕಿದರು.

ರಾಜಸ್ಥಾನ್‌ ರಾಯಲ್ಸ್‌ ತಂಡ 7 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 41 ರನ್‌ ಗಳಿಸಿದೆ.

ಜೋಶ್‌ ಬಟ್ಲರ್‌ ಔಟ್‌

ಜೋಶ್‌ ಬಟ್ಲರ್‌ 16 ಎಸೆತಗಳಲ್ಲಿ 21 ರನ್‌ ಗಳಿಸಿ ಶಿವರಾಮ್‌ ಮಾವಿಗೆ ವಿಕೆಟ್‌ ಒಪ್ಪಿಸಿದರು.

ರಾಜಸ್ಥಾನ್‌ ರಾಯಲ್ಸ್‌ 6 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 39 ರನ್‌ ಗಳಿಸಿದೆ.

ಸಂಜು ಸ್ಯಾಮ್ಸನ್‌ ಔಟ್‌

ರಾಯಲ್ಸ್‌ನ ಯುವ ಆಟಗಾರ ಸಂಜು ಸ್ಯಾಮ್ಸನ್‌ 8 ರನ್‌ ಗಳಿಸಿದ ಶಿವರಾಮ್‌ ಮಾವಿಗೆ ವಿಕೆಟ್‌ ಒಪ್ಪಿಸಿದರು.

3 ಓವರ್‌ಗಳಲ್ಲಿ 21 ರನ್‌ ಗಳಿಸಿದ ರಾಯಲ್ಸ್‌

ರಾಜಸ್ಥಾನ್‌ ರಾಯಲ್ಸ್‌ ತಂಡ 3 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 21 ರನ್‌ ಗಳಿಸಿದೆ.

ಸ್ಟೀವ್‌ ಸ್ಮಿತ್‌ ಔಟ್‌

ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸ್ವೀವ್‌ ಸ್ಮಿತ್‌ ಅವರು 3 ರನ್‌ ಗಳಿಸಿ ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ಮೊದಲ ಓವರ್‌ನಲ್ಲಿ 12 ಗಳಿಸಿದ ರಾಯಲ್ಸ್‌

175 ರನ್‌ ಗುರಿ

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮೊದಲು ಬ್ಯಾಟಿಂಗ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿದೆ.

ಟಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿದ ಪಿ.ಕಮಿನ್ಸ್

ಪ್ಯಾಟ್‌ ಕಮಿನ್ಸ್‌ 10 ಎಸೆತಗಳಲ್ಲಿ 12 ರನ್‌ ಗಳಿಸಿ ಟಾಮ್‌ ಕರನ್‌ ಔಟಾದರು.

ಕೆಕೆಆರ್‌ 16 ಓವರ್‌ಗಳಲ್ಲಿ 127 ರನ್‌

ಕೆಕೆಆರ್‌ ತಂಡ 16 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 127 ರನ್‌ ಗಳಿಸಿದೆ.

ರಜ್‌ಪೂತ್‌ ಎಸೆತಕ್ಕೆ ರಸೆಲ್ ಔಟ್

ಮೂರನೇ ವಿಕೆಟ್‌ ಪತನ

ಕೆಕೆಆರ್‌ ತಂಡದ ಯುವ ಆಟಗಾರ ಶುಭಮನ್‌ ಗಿಲ್‌ 34 ಎಸೆತಗಳಲ್ಲಿ 47 ರನ್‌ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು.

22 ರನ್‌ ಗಳಿಸಿ ನಿತೀಶ್‌ ರಾಣಾ ಔಟ್‌

17 ಎಸೆತಗಳಲ್ಲಿ 22 ರನ್‌ ಗಳಿಸಿದ ನಿತೀಶ್‌ ರಾಣಾ ಅವರನ್ನು ರಾಹುಲ್‌ ತವಾಟಿಯಾಗೆ ಔಟ್‌ ಮಾಡಿದರು.

10ನೇ ಓವರ್‌ಗಳಲ್ಲಿ 85 ರನ್‌ ಗಳಿಸಿದ ಕೆಕೆಆರ್‌

ಕೆಕೆಆರ್‌ ತಂಡ 10 ಓವರ್‌ಗಲ್ಲಿ 2 ನಷ್ಟಕ್ಕೆ 82 ರನ್‌ ಗಳಿಸಿದೆ.

8 ಓವರ್‌ಗಳಲ್ಲಿ 66 ರನ್‌ ಗಳಿಸಿದ ಕೆಕೆಆರ್‌

ಕೆಕೆಆರ್‌ ತಂಡ 8 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 66 ರನ್‌ ಗಳಿಸಿದೆ.

ಏಳು ಓವರ್‌ ಅಂತ್ಯಕ್ಕೆ 52 ರನ್‌

ಕೆಕೆಆರ್‌ ತಂಡ ಏಳು ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 52 ರನ್‌ ಪೇರಿಸಿದೆ.

6 ಓವರ್‌ಗಳಲ್ಲಿ 42 ಗಳಿಸಿದ ಕೆಕೆಆರ್‌

ಕೆಕೆಆರ್ ತಂಡ 6 ಓವರ್‌ಗಳಲ್ಲಿ 42 ರನ್‌ ಗಳಿಸಿದೆ (ಶುಭಮನ್‌ ಗಿಲ್‌ 20*, ನಿತೀಶ್‌ ರಾಣಾ 4* ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ)

ಐದು ಓವರ್‌ಗಳಲ್ಲಿ 37 ರನ್‌ ಗಳಿಸಿದ ಕೆಕೆಆರ್‌

ಕೆಕೆಆರ್‌ ತಂಡ ಒಂದು ವಿಕೆಟ್‌ ಕಳೆದುಕೊಂಡು 37 ರನ್‌ ಗಳಿಸಿದೆ.

ಕೆಕೆಆರ್ ತಂಡದ ಮೊದಲ ವಿಕೆಟ್‌ ಪತನ

ಸುನಿಲ್‌ ನರೈನ್ 14 ಎಸೆತಗಳಲ್ಲಿ 15 ರನ್‌ ಗಳಿಸಿ ಜಯದೇವ್‌ ಉನದ್ಕಟ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

ಕೆಕೆಆರ್‌ ತಂಡ 3 ಓವರ್‌ಗಳಲ್ಲಿ 14 ರನ್‌

ಕೆಕೆಆರ್‌ ಪರ ಬ್ಯಾಟಿಂಗ್‌ ಆರಂಭಿಸಿರುವ ಶುಭಮನ್‌ ಗೀಲ್‌ 12*, ಸುನಿಲ್‌ ನಾರಾಯಣ್‌ 1* ರನ್‌ ಗಳಿಸಿದ್ದಾರೆ.

150ನೇ ಬಾರಿ ಫೀಲ್ಡಿಂಗ್ ಆಯ್ಕೆ

ರಾಜಸ್ಥಾನ್‌ ರಾಯಲ್ಸ್‌ ತಂಡವು ಇದುವರೆಗೆ 150ನೇ ಬಾರಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ತಂಡಗಳು ಇಂತಿವೆ

ರಾಜಸ್ಥಾನ್‌ ರಾಯಲ್ಸ್‌: ಸ್ಟೀವ್‌ ಸ್ಮಿತ್‌, ಜೋಶ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್‌, ಟಾಮ್‌ ಕರನ್‌, ರಾಹುಲ್‌ ತವಾಟಿಯಾ, ಶ್ರೇಯಸ್ ಗೋಪಾಲ್‌, ಜೋಫ್ರಾ ಆರ್ಚರ್‌, ಅಂಕಿತ್‌ ರಜ್‌ಪೂತ್‌, ಜಯದೇವ್‌ ಉನದ್ಕಟ್‌

ಕೋಲ್ಕತ್ತ ನೈಟ್ ರೈಡರ್ಸ್‌: ಎಸ್ ನರೈನ್, ಎಸ್.ಗಿಲ್, ಎನ್.ರಾಣಾ, ಇ ಮಾರ್ಗನ್, ಎ ರಸೆಲ್, ಡಿ.ಕಾರ್ತಿಕ್, ಪಿ.ಕಮಿನ್ಸ್, ಕೆ.ಯಾದವ್,  ಎಸ್‌ ಮಾವಿ, ಕೆ ನಾಗರಕೋಟಿ, ವಿ ಚಕ್ರವರ್ತಿ

ಕೆಕೆಆರ್‌ ವಿರುದ್ಧ ಟಾಸ್‌ ಗೆದ್ದ ರಾಯಲ್ಸ್‌: ಬೌಲಿಂಗ್‌ ಆಯ್ಕೆ

ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಜಸ್ಥಾನ್ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಉಭಯ ತಂಡಗಳಲ್ಲಿಯೂ ಅಬ್ಬರದ ಆಟವಾಡುವ ಬ್ಯಾಟಿಂಗ್‌ ಪಡೆ ಇರುವುದರಿಂದ ರನ್‌ಗಳ ಮಳೆಯೇ ಸುರಿಯುವ ನಿರೀಕ್ಷೆ ಗರಿಗೆದರಿದೆ.

ಕೋಲ್ಕತ್ತ ತಂಡವು ಈ ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಇನ್ನೊಂದನ್ನು ಸೋತಿದೆ. ಆದರೆ ರಾಜಸ್ಥಾನ ರಾಯಲ್ಸ್‌ ಆಡಿದ ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.