ADVERTISEMENT

ಇಶಾಂತ್‌ಗೆ ಗಾಯ; ಪೃಥ್ವಿ ಫಿಟ್

ಪಿಟಿಐ
Published 28 ಫೆಬ್ರುವರಿ 2020, 19:50 IST
Last Updated 28 ಫೆಬ್ರುವರಿ 2020, 19:50 IST
ಇಶಾಂತ್‌
ಇಶಾಂತ್‌   

ಕ್ರೈಸ್ಟ್‌ಚರ್ಚ್ : ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಶುಕ್ರವಾರ ಅಭ್ಯಾಸದ ಸಂದ ರ್ಭದಲ್ಲಿ ಗಾಯಗೊಂಡಿದ್ದಾರೆ. ಅದರಿಂ ದಾಗಿ ಅವರು ಇಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನವಾಗಿದೆ.

ಇಲ್ಲಿಯ ನೆಟ್ಸ್‌ಗೆ ಅಭ್ಯಾಸಕ್ಕೆ ಬಂದ ಕೆಲಹೊತ್ತಿನಲ್ಲಿಯೇ ಇಶಾಂತ್, ತಮ್ಮ ಬಲಪಾದದಲ್ಲಿ ವಿಪರೀತ ನೋವು ಇದ್ದ ಕಾರಣ ಚಿಕಿತ್ಸೆಗೆ ತೆರಳಿದರು. ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಐದು ವಿಕೆಟ್‌ಗಳನ್ನು ಗಳಿಸಿದ್ದರು.

‘ಸ್ಕ್ಯಾನಿಂಗ್ ಮಾಡಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಒಂದೊಮ್ಮೆ ಇಶಾಂತ್ ಅವರು ಫಿಟ್ ಆಗದಿದ್ದರೆ, ಅನುಭವಿ ಉಮೇಶ್ ಯಾದವ್ ಅಥವಾ ನವದೀಪ್ ಸೈನಿ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು.

ಪೃಥ್ವಿ ಫಿಟ್: ಗುರುವಾರ ಅಭ್ಯಾಸದ ಸಂದರ್ಭದಲ್ಲಿ ಎಡಗಾಲಿನ ನೋವು ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಚೇತರಿಸಿಕೊಂಡಿದ್ದಾರೆ. ಅವರು ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ ಎಂದು ತಂಡದ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಪೃಥ್ವಿ ಮೊದಲ ಇನಿಂಗ್ಸ್‌ನಲ್ಲಿ 16 ಮತ್ತು ಎರಡನೇಯದ್ದರಲ್ಲಿ 14 ರನ್ ಗಳಿಸಿದ್ದರು. ಅದರಿಂದಾಗಿ ಎರಡನೇ ಟೆಸ್ಟ್‌ನಲ್ಲಿ ಅವರ ಬದಲಿಗೆ ಶುಭಮನ್ ಗಿಲ್‌ ಕಣಕ್ಕಿಳಿಯುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.