ADVERTISEMENT

ಹೊಸ ತಂಡ ಸೇರ್ಪಡೆಗೆ ಬಿಡ್ ಆಹ್ವಾನಿಸಿದ ಐಎಸ್‌ಎಲ್

ಪಿಟಿಐ
Published 4 ಸೆಪ್ಟೆಂಬರ್ 2020, 21:24 IST
Last Updated 4 ಸೆಪ್ಟೆಂಬರ್ 2020, 21:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಒಂದು ಹೊಸ ಫುಟ್‌ಬಾಲ್ ತಂಡದ ಸೇರ್ಪಡೆಗಾಗಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಶುಕ್ರವಾರ ಬಿಡ್ ಆಹ್ವಾನಿಸಿದೆ.

ಇದರಿಂದಾಗಿ ಕೋಲ್ಕತ್ತದ ಈಸ್ಟ್‌ ಬೆಂಗಾಲ್ ತಂಡವು ಐಎಸ್‌ಎಲ್‌ ಸೇರ್ಪಡೆಗೆ ಅವಕಾಶ ಲಭಿಸಿದಂತಾಗಿದೆ.

ಬುಧವಾರ ಈಸ್ಟ್‌ ಬೆಂಗಾಲ್ ತಂಡದ ಪರ ಹಣ ಹೂಡಲು ಕೋಲ್ಕತ್ತ ಮೂಲದ ಶ್ರೀ ಸಿಮೆಂಟ್ಸ್‌ ಮುಂದೆ ಬಂದಿದೆ. ಈ ಕಂಪೆನಿಯು ಹೂಡಿಕೆ ಮಾಡುವಂತೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮನವೊಲಿಸಿದ್ದರು ಎಂದು ಹೇಳಲಾಗಿದೆ.

ADVERTISEMENT

‘ಲೀಗ್‌ನಲ್ಲಿ ಇನ್ನೊಂದು ತಂಡದ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಬಿಡ್‌ ಸಲ್ಲಿಸಲು ಜಾಹೀರಾತು ನೀಡಲಾಗಿದೆ. 2020–2021ರ ಟೂರ್ನಿಯಲ್ಲಿ ಈ ತಂಡವು ಕಣಕ್ಕಿಳಿಯುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆರು ನಗರಗಳಾದ ದೆಹಲಿ, ಲುಧಿಯಾನಾ, ಅಹಮದಾಬಾದ್, ಕೋಲ್ಕತ್ತ, ಸಿಲಿಗುರಿ ಮತ್ತು ಭೋಪಾಲ್‌ ನಿಂದ ಬಿಡ್‌ಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಲಾಗಿದೆ.

ಸೆಪ್ಟೆಂಬರ್ 7 ಮತ್ತು 8ರಂದು ಸಂಜೆ 5ರೊಳಗೆ ಇ ಮೇಲ್ ಮೂಲಕ ಬಿಡ್ ಸಲ್ಲಿಸಬೇಕು. ಮರುಪಾವತಿಸದ ಮತ್ತು ಮರುಹೊಂದಾಣಿಕೆ ಮಾಡಲು ಅವಕಾಶವಿಲ್ಲದ ₹5 ಲಕ್ಷ ಶುಲ್ಕ ಕಟ್ಟಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.