ADVERTISEMENT

ಟೆಸ್ಟ್‌ ತಂಡಕ್ಕೆ ಜೇಸನ್‌ ರಾಯ್‌

ರಾಯಿಟರ್ಸ್
Published 17 ಜುಲೈ 2019, 19:04 IST
Last Updated 17 ಜುಲೈ 2019, 19:04 IST

ಲಂಡನ್‌ : ಐರ್ಲೆಂಡ್‌ ವಿರುದ್ಧ ಮುಂದಿನ ಬುಧವಾರ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯಕ್ಕೆ ಆರಂಭ ಆಟಗಾರ ಜೇಸನ್‌ ರಾಯ್‌ ಅವರನ್ನು ಮೊದಲ ಬಾರಿ ಆಯ್ಕೆ ಮಾಡಲಾಗಿದೆ. ವಿಶ್ವಕಪ್‌ನಲ್ಲಿ ಅವರು 443 ರನ್‌ ಗಳಿಸಿದ್ದರು.

ವೇಗದ ಬೌಲರ್‌ಗಳಾದ ಜೋಫ್ರಾ ಆರ್ಚರ್‌ ಮತ್ತು ಮಾರ್ಕ್‌ ವುಡ್‌ ಅವರು ಗಾಯಾಳಾಗಿರುವ ಕಾರಣ ಪರಿಗಣಿಸಿಲ್ಲ. ತಂಡ ಇಂತಿದೆ.

ಜೋ ರೂಟ್‌ (ನಾಯಕ), ಮೊಯಿನ್‌ ಅಲಿ, ಜೇಮ್ಸ್‌ ಆ್ಯಂಡರ್ಸನ್‌, ಜಾನಿ ಬೇಸ್ಟೊ (ವಿಕೆಟ್‌ ಕೀಪರ್‌), ಸ್ಟುವರ್ಟ್‌ ಬ್ರಾಡ್‌, ರೋರಿ ಬರ್ನ್ಸ್‌, ಸ್ಯಾಮ್‌ ಕರನ್‌, ಜೊ ಡೆನ್ಲಿ, ಲೂಯಿಸ್‌ ಗ್ರೆಗರಿ, ಜಾಕ್‌ ಲೀಚ್‌, ಜೇಸನ್‌ ರಾಯ್‌, ಒಲಿ ಸ್ಟೋನ್‌, ಕ್ರಿಸ್‌ ವೋಕ್ಸ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.