ADVERTISEMENT

ಟೆನಿಸ್‌: ಕಾರ್ತೀಕ ಸೆಮಿಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:29 IST
Last Updated 27 ಜನವರಿ 2021, 15:29 IST
ಕೆಎಸ್‌ಎಲ್‌ಟಿಎ ಅಂಗಣ
ಕೆಎಸ್‌ಎಲ್‌ಟಿಎ ಅಂಗಣ   

ಬೆಂಗಳೂರು: ಪ್ರಮುಖ ಆಟಗಾರ್ತಿಯರನ್ನು ಸೋಲಿಸಿ ಗಮನ ಸೆಳೆದಿರುವ ಕಾರ್ತೀಕ ಪದ್ಮಕುಮಾರ್, ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಟ್ಯಾಲೆಂಟ್ ಸೀರಿಸ್‌ನ ತತ್ವಂ ಜೂನಿಯರ್ ಟೂರ್‌ನಲ್ಲಿ ಅಮೋಘ ಓಟ ಮುಂದುವರಿಸಿದ್ದು 12 ವರ್ಷದೊಳಗಿನ ಬಾಲಕಿಯರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ತನು ವಿಶ್ವಾಸ್ ವಿರುದ್ಧ 7–5, 6–1ಲ್ಲಿ ಕಾರ್ತೀಕ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಅವರು ಆರನೇ ಶ್ರೇಯಾಂಕಿತೆ ಅಗಮ್ಯ ಚಂದ್ರ ಎದುರು ಜಯ ಗಳಿಸಿದ್ದರು.

ನಾಲ್ಕರ ಘಟ್ಟದಲ್ಲಿ ಕಾರ್ತೀಕ, ಎರಡನೇ ಶ್ರೇಯಾಂಕಿತ ಆಟಗಾರ್ತಿ ಕಾಶ್ವಿ ಸುನಿಲ್ ಅವರನ್ನು ಎದುರಿಸಲಿದ್ದಾರೆ. ಎಂಟರ ಘಟ್ಟದಲ್ಲಿ ಕಾಶ್ವಿ ಅವರು ಜೀವಿಕ ಚೆನ್ನಬೈರೇಗೌಡ ಅವರ ಪ್ರಬಲ ಪೈಪೋಟಿಯನ್ನು ಮೆಟ್ಟಿನಿಂತರು. ಬುಧವಾರ ನಡೆದ ಪಂದ್ಯದಲ್ಲಿ ಅವರು 7-6 (9), 6-3ರಲ್ಲಿ ಜಯ ಗಳಿಸಿದರು. ಐದನೇ ಶ್ರೇಯಾಂಕದ ಐಲಿನ್ ಮಿರಿಯಂ ಕಾರ್ನೆಲೊ ಎದುರು6-4, 6-2ರಲ್ಲಿ ಗೆಲುವು ಸಾಧಿಸಿ ಅನ್ವೇಷಾ ಧರ್ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇರಿಸಿದರು. ಅವರು ಅಗ್ರ ಶ್ರೇಯಾಂಕದ ಮೇಘನಾ ಜಿ.ಡಿ ಅವರನ್ನು ಮುಂದಿನ ಹಂತದಲ್ಲಿ ಎದುರಿಸುವರು. ಮೇಘನಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿತಿಶಾ ಚೌಧರಿ ವಿರುದ್ಧ6-3, 6-0ರಲ್ಲಿ ಜಯ ಸಾಧಿಸಿದರು.

ADVERTISEMENT

ಫಜಲ್ ಅಲಿ, ಲಿಕಿತ್ ಗೌಡ ಸೆಮಿಫೈನಲ್‌ಗೆ

12 ವರ್ಷದೊಳಗಿನ ಬಾಲಕರ ವಿಭಾಗದ ಅಗ್ರ ಶ್ರೇಯಾಂಕದ ಆಟಗಾರ ಫಜಲ್ ಅಲಿ ಮತ್ತು ಎರಡನೇ ಶ್ರೇಯಾಂಕದ ಲಿಕಿತ್ ಗೌಡ ಸೆಮಿಫೈನಲ್ ‍ಪ್ರವೇಶಿಸಿದರು. ಮೂರನೇ ಶ್ರೇಯಾಂಕದ ತನಿಶ್ ವೇಪನಪಳ್ಳಿ ಅವರನ್ನು ಮಣಿಸಿ ಎಂಟನೇ ಶ್ರೇಯಾಂಕದ ರಣವೀರ್ ಸಿಂಗ್ ಪನ್ನು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು. ತಮಿಳುನಾಡಿನ ಫಜಲ್ 6-2, 6-1ರಲ್ಲಿ ಅನಿರುದ್ಧ ಪಳನಿಸಾಮಿ ವಿರುದ್ಧ ಜಯ ಗಳಿಸಿದರೆಲಿಖಿತ್ ಗೌಡ 6-2, 6-0ರಲ್ಲಿ ಅನುರಾಗ್ ಕಲ್ಲಂಬೆಲ ಅವರನ್ನು ಮಣಿಸಿದರು. ದಿಗಂತ್ ಎಂ6-2, 6-3ರಲ್ಲಿ ಸ್ಟೀಫನ್ ಡೈಲನ್ ವಿರುದ್ಧ ಜಯ ಸಾಧಿಸಿದರು. 6-4, 7-5ರಲ್ಲಿ ರಣವೀರ್ ಸಿಂಗ್, ತನಿಶ್ ವೇಪನಪಳ್ಳಿ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.