ADVERTISEMENT

ಖಲೀಲ್ ‘ಫೋನ್‌ ಕಾಲ್‌’ಗೆ ಪ್ರೇಕ್ಷಕರು ಬೌಲ್ಡ್‌!

​ಪ್ರಜಾವಾಣಿ ವಾರ್ತೆ
Published 10 ಮೇ 2019, 3:45 IST
Last Updated 10 ಮೇ 2019, 3:45 IST
ಖಲೀಲ್‌ ಅಹಮ್ಮದ್ ಸಂಭ್ರಮದ ವಿಶಿಷ್ಟ ಭಂಗಿ
ಖಲೀಲ್‌ ಅಹಮ್ಮದ್ ಸಂಭ್ರಮದ ವಿಶಿಷ್ಟ ಭಂಗಿ   

ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ವೇಗಿ ಖಲೀಲ್ ಅಹಮ್ಮದ್ ವಿಕೆಟ್ ಗಳಿಸಿದಾಗ ಸಂಭ್ರಮಿಸಿದ ವಿಶಿಷ್ಟ ಭಂಗಿಗೆ ಕ್ರಿಕೆಟ್ ಪ್ರಿಯರು ಬೌಲ್ಡ್ ಆಗಿದ್ದಾರೆ. ಈ ಎಡಗೈ ಬೌಲರ್ ಸಂಭ್ರಮಿಸುವಾಗ ಎಡಗೈಯಲ್ಲಿ ಫೋನ್ ಡಯಲ್ ಮಾಡಿದಂತೆ ಮಾಡಿ ಬಲಗೈಯನ್ನು ಫೋನ್‌ ರೀತಿಯಲ್ಲಿ ಕಿವಿಗೆ ಇರಿಸಿ ಮಾತನಾಡುವ ಭಂಗಿ ಪ್ರದರ್ಶಿಸಿದ್ದಾರೆ.

ಬುಧವಾರದ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ನಂತರ ಖಲೀಲ್ ಈ ಭಂಗಿಯನ್ನು ಪ್ರದರ್ಶಿಸಿದ್ದರು. ಇದು ‘ಫೋನ್‌ ಕಾಲ್‌’ ಸಂಭ್ರಮ ಎಂದು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗಿದೆ.

ಅವರ ಈ ವಿಶಿಷ್ಟ ಭಂಗಿಗೆ ಕಾರಣಗಳನ್ನು ತಿಳಿಯುವ ಪ್ರಯತ್ನವನ್ನೂ ಕೆಲ ಅಭಿಮಾನಿಗಳು ಮಾಡಿದ್ದಾರೆ. ಇದು ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ‘ನಿಮ್ಮ ಒಂದು ದೂರವಾಣಿ ಕರೆಯಿಂದ ನಾನು ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.