ADVERTISEMENT

ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿ: ಮಣಿಕಾಂತ್‌ ದ್ವಿಶತಕ; ಕರ್ನಾಟಕಕ್ಕೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:36 IST
Last Updated 10 ಡಿಸೆಂಬರ್ 2025, 16:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮಣಿಕಾಂತ್‌ ಶಿವಾನಂದ ಅವರ ದ್ವಿಶತಕ ಹಾಗೂ ಧ್ರುವ್‌ ಕೃಷ್ಣನ್‌ ಅವರ ಶತಕದ ನೆರವಿನಿಂದ ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 242 ರನ್‌ಗಳ ಬೃಹತ್‌ ಮುನ್ನಡೆ ಪಡೆಯಿತು.

ಒಡಿಶಾದ ಬಲಾಂಗಿರ್‌ನಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ಬುಧವಾರ 1 ವಿಕೆಟ್‌ಗೆ 50 ರನ್‌ಗಳೊಡನೆ ಆಟ ಮುಂದುವರಿಸಿದ ಅನ್ವಯ್‌ ದ್ರಾವಿಡ್‌ ಪಡೆಯು ದಿನದ ಮೂರೂ ಅವಧಿಗಳಲ್ಲಿ ಮೇಲುಗೈ ಸಾಧಿಸಿತು. ಮಣಿಕಾಂತ್‌ (227 ರನ್‌; 4x20, 6x7) ಹಾಗೂ ಧ್ರುವ್‌ (105 ರನ್‌; 4x13) ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 223 ರನ್‌ ಸೇರಿಸಿದರು.

ADVERTISEMENT

ಧ್ರುವ್‌ ಅವರು ಶತಕ ಗಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಿಯಾಂಶು ಮೊಹಾಂತಿ ಅವರಿಗೆ ವಿಕೆಟ್‌ ಒಪ್ಪಿಸಿದರು. ನಂತರ, ಮಣಿಕಾಂತ್‌ ಹಾಗೂ ನಾಯಕ ಅನ್ವಯ್‌ (ಔಟಾಗದೇ 62 ರನ್‌; 4x2) ಮೂರನೇ ವಿಕೆಟ್‌ಗೆ 169 ರನ್‌ಗಳ ಜೊತೆಯಾಟವಾಡಿದರು. 

ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು 107 ಓವರ್‌ಗಳಲ್ಲಿ 3 ವಿಕೆಟ್‌ಗೆ 412 ರನ್‌ ಗಳಿಸಿದೆ. ಅನ್ವಯ್‌ ಅವರೊಂದಿಗೆ ರೋಹಿತ್‌ ಎ.ಎ. (ಔಟಾಗದೇ 4) ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಒಡಿಶಾ: 58.4 ಓವರ್‌ಗಳಲ್ಲಿ 170; ಕರ್ನಾಟಕ: 107 ಓವರ್‌ಗಳಲ್ಲಿ 3 ವಿಕೆಟ್‌ಗೆ 412 (ಮಣಿಕಾಂತ್‌ ಶಿವಾನಂದ 227,  ಧ್ರುವ್‌ ಕೃಷ್ಣನ್‌ 105, ಅನ್ವಯ್‌ ದ್ರಾವಿಡ್‌ ಔಟಾಗದೇ 62; ಪ್ರಿಯಾಂಶು ಮೊಹಾಂತಿ 73ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.