ADVERTISEMENT

ಮಳೆ ಆಟ: ಶಿವಮೊಗ್ಗಕ್ಕೆ ಸವಾಲಿನ ಗುರಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:46 IST
Last Updated 20 ಆಗಸ್ಟ್ 2019, 19:46 IST

ಬೆಂಗಳೂರು: ಮಂಗಳವಾರ ರಾತ್ರಿ ಮಳೆಯ ಆಟದ ನಡುವೆ ನಡೆದ ಪಂದ್ಯದಲ್ಲಿ ಬೆಂಗಳೂರುಬ್ಲಾಸ್ಟರ್ಸ್ ತಂಡವು ಶಿವಮೊಗ್ಗ ಲಯನ್ಸ್‌ಗೆ ಸವಾಲಿನ ಗುರಿ ನೀಡಿತು.

ಟಾಸ್ ಗೆದ್ದ ಶಿವಮೊಗ್ಗ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ ಆರಂಭಿಸಿದ ಬೆಂಗಳೂರು ತಂಡವು 16 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 116 ರನ್ ಗಳಿಸಿತು. ಈ ಇನಿಂಗ್ಸ್‌ ನಡುವೆ ಎರಡು ಬಾರಿ ರಭಸದ ಮಳೆ ಸುರಿಯಿತು. ಅದರಿಂದಾಗಿ ಕೆಲಹೊತ್ತು ಆಟ ನಿಂತಿತ್ತು. ಮಳೆ ನಿಂತ ಸುಮಾರಿಗೆ ಪಿಚ್ ಮತ್ತು ಮೈದಾನದ ತಪಾಸಣೆ ನಡೆಸಿದ ರೆಫರಿ ಶಾವೀರ್ ತಾರಪುರ್, ಅಂಪೈರ್‌ಗಳಾದ ಎಂ.ಜಿ. ಸುದರ್ಶನ್ ಮತ್ತು ಅಭಿಜೀತ್ ಬೆಂಗೇರಿ ಶಿವಮೊಗ್ಗ ತಂಡಕ್ಕೆ ಪರಿಷ್ಕೃತ ಗುರಿ ನೀಡಿದರು.

ವಿ. ಜಯದೇವನ್ ನಿಯಮದನ್ವಯ ಶಿವಮೊಗ್ಗ ತಂಡವು ಗೆಲ್ಲಲು 12 ಓವರ್‌ಗಳಲ್ಲಿ 106 ರನ್‌ ಗಳಿಸಬೇಕಾಯಿತು.

ADVERTISEMENT

ಬೆಂಗಳೂರು ತಂಡದ ಬಿ.ಆರ್. ಶರತ್ (42; 23ಎಸೆತ, 6ಬೌಂಡರಿ, 2ಸಿಕ್ಸರ್) ಮತ್ತು ರೋಹನ್ ಕದಂ (25; 31ಎಸೆತ, 2ಬೌಂಡರಿ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದರು.

ಬೆಂಗಳೂರು ತಂಡದ ಈ ಮೊದ ಲಿನ ಎರಡೂ ಪಂದ್ಯಗಳು ಮಳೆಗೆ ಆಹುತಿಯಾಗಿದ್ದವು. ಶಿವಮೊಗ್ಗ ತಾನು ಆಡಿರುವ ಎರಡು ಪಂದ್ಯಗಳನ್ನೂ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು:ಬೆಂಗಳೂರು ಬ್ಲಾಸ್ಟರ್ಸ್: 16 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 114 (ಬಿ.ಆರ್. ಶರತ್ 42, ರೋಹನ್ ಕದಂ 25, ಎಸ್‌.ಜೆ. ನಿಕಿನ್ ಜೋಸ್ ಔಟಾಗದೆ 23, ನಾಗಭರತ್ ಔಟಾಗದೆ 16, ಪೃಥ್ವಿರಾಜ್ 20ಕ್ಕೆ1, ಪವನ್ ದೇಶಪಾಂಡೆ 12ಕ್ಕೆ2) ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.