ADVERTISEMENT

ಕೆಪಿಎಲ್‌: ಬೆಳಗಾವಿ ಪ್ಯಾಂಥರ್ಸ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 18:37 IST
Last Updated 2 ಅಕ್ಟೋಬರ್ 2019, 18:37 IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಸಿಲುಕಿರುವ ಅಲಿ ಅಶ್ಫಾಕ್ ತಾರ್ ಮಾಲೀಕತ್ವದ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಕೆಎಸ್‌ಸಿಎ ಅಮಾನತು ಮಾಡಿದೆ.

ಕೆಪಿಎಲ್‌ನಲ್ಲಿ ಬೆಟ್ಟಿಂಗ್ ನಡೆಸಿದ್ದ ಆರೋಪದ ಮೇಲೆ ಅಲಿಯನ್ನು ಹೋದ ತಿಂಗಳು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅದರ ಆಧಾರದಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡ ಮತ್ತು ಮಾಲೀಕನನ್ನು ಅಮಾನತು ಮಾಡಲಾಗಿದೆ.

ಬುಧವಾರಕ್ಕೆ ಅವಧಿ ಮುಗಿಸಿದ ಆಡಳಿತ ಸಮಿತಿಯು ಈ ಅಮಾನತು ಆದೇಶ ನೀಡಿದೆ. ಮಂಗಳವಾರ ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಗುರುವಾರ ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಆಡಳಿತ ಸಮಿತಿಯು ಬೆಳಗಾವಿ ತಂಡದ ಮೇಲೆ ಮುಂದಿನ ಕ್ರಮ ಜರುಗಿಸಬಹುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರೋಪಿ ಅಲಿಯು ಉದ್ಯಮಿಯಾಗಿದ್ದು, ಅಬುದಾಭಿಯ ಟಿ10 ಕ್ರಿಕೆಟ್‌ ಲೀಗ್‌ನಲ್ಲಿ ಆಡುವ ಕೇರಳ ನೈಟ್ಸ್‌ ಫ್ರ್ಯಾಂಚೈಸ್‌ನ ಸಹಮಾಲೀಕರೂ ಆಗಿದ್ದಾರೆ.

‘ತಪ್ಪಿತಸ್ಥರನ್ನು ರಕ್ಷಿಸುವ ಮಾತೇ ಇಲ್ಲ. ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಆದ್ದರಿಂದಲೇ ಬೆಳಗಾವಿ ತಂಡ ಮತ್ತು ಮಾಲೀಕರ ವಿರುದ್ಧ ಈ ಕ್ರಮಕೈಗೊಂಡು ವಿಷಯ ರವಾನಿಸಲಾಗಿದೆ. ಇದು ಉಳಿದೆಲ್ಲ ತಂಡಗಳಿಗೂ ಮುನ್ನೆಚ್ಚರಿಕೆಯೂ ಹೌದು. ಇಂತಹ ತಪ್ಪನ್ನು ಯಾರು ಮಾಡಬಾರದು’ ಎಂದು ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.