ADVERTISEMENT

ಕ್ರಿಕೆಟ್‌: ಸೃಜನ್ ಶತಕ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:03 IST
Last Updated 6 ಜುಲೈ 2022, 4:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸೃಜನ್ ನಂದನ್‌ (129) ಮತ್ತು ಅರ್ಸಲಾನ್‌ (ಔಟಾಗದೆ 100) ಅವರ ಅಮೋಘ ಶತಕಗಳ ನೆರವಿನಿಂದ ವಿಲ್ಸನ್ ಗಾರ್ಡನ್ ಕ್ರಿಕೆಟ್‌ ಕ್ಲಬ್ ತಂಡವು ಎಂ.ಎ.ಟಿ. ಆಚಾರ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು 1ರಿಂದ ಎರಡನೇ ಡಿವಿಷನ್‌ ಲೀಗ್ ಟೂರ್ನಿಯಲ್ಲಿ ಜುಪಿಟರ್ಸ್‌ ಕ್ರಿಕೆಟರ್ಸ್ ಸಂಸ್ಥೆ ತಂಡದೊಂದಿಗೆ ಡ್ರಾ ಸಾಧಿಸಿತು.

ಸಂಕ್ಷಿಪ್ತ ಸ್ಕೋರುಗಳು: ಜುಪಿಟರ್ಸ್ ಕ್ರಿಕೆಟರ್ಸ್ ಸಂಸ್ಥೆ: 64.1 ಓವರ್‌ಗಳಲ್ಲಿ 288 (ಚಿರಾಗ್ ನಾಯಕ್‌ 49, ಡೆಸ್ಮಂಡ್‌ ಆ್ಯಂಟನಿ 122; ಕರಣ್‌ 45ಕ್ಕೆ 5, ಸಿದ್ಧಾರ್ಥ್ ವಿ.ಎಸ್‌. 48ಕ್ಕೆ 3). ವಿಲ್ಸನ್ ಗಾರ್ಡನ್‌ ಸಿಸಿ: 85.1 ಓವರ್‌ಗಳಲ್ಲಿ 6ಕ್ಕೆ 383 ಡಿಕ್ಲೇರ್ಡ್‌ (ಸೃಜನ್ ನಂದನ್‌ 129, ಶೆಜಾನ್ ಖಾನ್‌ 47, ಅರ್ಸಲಾನ್‌ ಔಟಾಗದೆ 100, ಸಚಿನ್‌ ಎಸ್‌.ಎ. ಔಟಾಗದೆ 52; ಅರ್ಜುನ್ ಪಾಟೀಲ್‌ 71ಕ್ಕೆ 2, ಚಿರಂತ್‌ ಎಸ್‌. 128ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ.

ಫ್ರೆಂಡ್ಸ್ ಯೂನಿಯನ್‌ ಸಿಸಿ (2): 55.3 ಓವರ್‌ಗಳಲ್ಲಿ 118 (ಸಿದ್ಧಾರ್ಥ್‌ ರಾವ್‌ 34, ಶ್ರವಣ್‌ ಬಾಬು 33; ಎಸ್‌.ಎಸ್‌. ಸುಮಂತ್‌ 17ಕ್ಕೆ 4, ನಿತಿನ್ ನಾಯ್ಡು 22ಕ್ಕೆ 2, ಮಾಧವ ಎನ್‌.ಆರ್. 30ಕ್ಕೆ 2) ಮತ್ತು ಎರಡನೇ ಇನಿಂಗ್ಸ್: 15.2 ವಿಕೆಟ್‌ ನಷ್ಟವಿಲ್ಲದೆ 92 (ಬದ್ರಿನಾರಾಯಣ್‌ ಆರ್‌ ಔಟಾಗದೆ 50, ರವಿ ಖೈರವ್ ರೆಡ್ಡಿ ಔಟಾಗದೆ 41). ಹೆರಾನ್ಸ್ ಕ್ರಿಕೆಟ್‌ ಕ್ಲಬ್‌: 6ಕ್ಕೆ 268 ಡಿ. (ವಿನೀತ್ ಮಂಜುನಾಥ್‌ 57, ಮೊಹಮ್ಮದ್ ವಸೀಫ್‌ ಎಂ. ಔಟಾಗದೆ 107, ಮಣಿ ಔಟಾಗದೆ 46, ನಿಶಾಂತ್‌ ಎಸ್‌. 42ಕ್ಕೆ 2, ಅರ್ಜುನ್ ಕುಮಾರ್ 69ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ.

ADVERTISEMENT

ಜವಾಹರ್ ಸಿಸಿ (1): 60.4 ಓವರ್‌ಗಳಲ್ಲಿ 220 (ಅಮೋದ್‌ ಕಳುವೆ 35, ಪೃಥ್ವಿ 62, ಕೆ.ಸಿ. ಕಾರ್ಯಪ್ಪ 28; ಉತ್ತಮ್ ಗೌಡ 68ಕ್ಕೆ 2, ಸಂಜಯ್‌ ಕುಮಾರ್ ಸಿಹಾಗ್‌ 54ಕ್ಕೆ 4, ವರುಣ್ ರಾವ್‌ 28ಕ್ಕೆ 3). ಎರಡನೇ ಇನಿಂಗ್ಸ್: 13 ಓವರ್‌ಗಳಲ್ಲಿ 1ಕ್ಕೆ 58 (ಕಾರ್ತಿಕ್‌ 21, ಪೃಥ್ವಿ ಔಟಾಗದೆ 22). ಬೆಂಗಳೂರು ಆಕೇಷನಲ್ಸ್: 71.4 ಓವರ್‌ಗಳಲ್ಲಿ 331 (ರಿತಿನ್‌ ಕ್ರಿಸ್ಟಿ ಸಿ. 66, ಸೂರಜ್ ಅಹುಜಾ 122, ಕುಶ್ ಮರಾಠೆ 96; ಕೆ.ಸಿ.ಕಾರ್ಯಪ್ಪ 100ಕ್ಕೆ 3, ಶಿಮೊನ್‌ ಲೂಯಿಸ್‌ 67ಕ್ಕೆ 2, ಸೌರಭ್ ಮುತ್ತೂರ್ 6ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ.

ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌: 53.4 ಓವರ್‌ಗಳಲ್ಲಿ 115 (ಆಯುಧ್ ಶರ್ಮಾ 24, ನವೀನ್ 25; ಸಮಯನ್ ಶ್ರೀವಾಸ್ತವ್‌ 17ಕ್ಕೆ 2, ಮೋನಿಶ್ ರೆಡ್ಡಿ 39ಕ್ಕೆ 3, ಹಾರ್ದಿಕ್ ರಾಜ್‌ 25ಕ್ಕೆ 4). ಕೋಲ್ಸ್ ಕ್ರಿಕೆಟ್‌ ಕ್ಲಬ್‌: 47.1 ಓವರ್‌ಗಳಲ್ಲಿ 6ಕ್ಕೆ 298 ಡಿ. (ಭರತ್‌ಕುಮಾರ್ ಎಸ್‌. ಔಟಾಗದೆ 100, ಅರುಣ್ ಕೆ. 72, ಮಂಜೇಶ್ ರೆಡ್ಡಿ 55; ಚೇತನ್‌ ಕೆ.ವಿ. 114ಕ್ಕೆ 4). ಫಲಿತಾಂಶ: ಕೋಲ್ಸ್ ಕ್ರಿಕೆಟ್‌ ಕ್ಲಬ್‌ಗೆ ಇನಿಂಗ್ಸ್ ಮತ್ತು 102 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.