ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಕಾರ್ಯದರ್ಶಿ ಇಲೆವೆನ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 20:10 IST
Last Updated 7 ಸೆಪ್ಟೆಂಬರ್ 2025, 20:10 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌ ತಂಡವು ಇಲ್ಲಿನ ಕಿಣಿ ಕ್ರೀಡಾಂಗಣದಲ್ಲಿ ನಡೆದ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯನ್ನು 10 ವಿಕೆಟ್‌ಗಳಿಂದ ಮಣಿಸಿತು.

ADVERTISEMENT

ಕಾರ್ಯದರ್ಶಿ ಇಲೆವೆನ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ 373 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಆಲೌಟ್‌ ಆದ ಗುಜರಾತ್‌ ತಂಡವು, ಎರಡನೇ ಇನಿಂಗ್ಸ್‌ನಲ್ಲಿ 240 ರನ್‌ ಗಳಿಸಿತ್ತು. ಹೀಗಾಗಿ, ಕಾರ್ಯದರ್ಶಿ ಇಲೆವೆನ್‌ ತಂಡದ ಗೆಲುವಿಗೆ 6 ರನ್‌ ಅಗತ್ಯವಿತ್ತು. ಅದನ್ನು ವಿಕೆಟ್‌ ನಷ್ಟವಿಲ್ಲದೆ ಗಳಿಸಿ ಜಯ ಸಾಧಿಸಿತು. 

ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ ತಂಡವು ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯೊಂದಿಗೆ ಡ್ರಾ ಸಾಧಿಸಿತು. ಐಎಎಫ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವೆನ್‌ ತಂಡವು ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಸ್ಥೆಯೊಂದಿಗೆ ಡ್ರಾ ಮಾಡಿಕೊಂಡಿತು. ಈ ಎರಡೂ ಪಂದ್ಯಗಳಿಗೆ ಮಳೆ ಅಚರಣೆ ಉಂಟು ಮಾಡಿತ್ತು. 

ಸಂಕ್ಷಿಪ್ತ ಸ್ಕೋರ್‌: ಕಿಣಿ ಕ್ರೀಡಾಂಗಣ:  ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌: ಮೊದಲ ಇನಿಂಗ್ಸ್‌: 373 ಮತ್ತು ಎರಡನೇ ಇನಿಂಗ್ಸ್‌: 1.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 7. ಗುಜರಾತ್‌ ಕ್ರಿಕೆಟ್‌ ಸಂಸ್ಥೆ: 138 ಮತ್ತು 69.2 ಓವರ್‌ಗಳಲ್ಲಿ 240 (ಅಭಿಷೇಕ್‌ ದೇಸಾಯಿ 47, ಉಮಂಗ್ ಕುಮಾರ್ 73; ಮಾಧವ್ ಪಿ. ಬಜಾಜ್‌ 73ಕ್ಕೆ 3, ಧ್ರುವ್‌ ಪಿ. 65ಕ್ಕೆ 4, ವೆಂಕಟೇಶ್‌ ಎಂ. 51ಕ್ಕೆ 2). ಫಲಿತಾಂಶ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌ ತಂಡಕ್ಕೆ 10 ವಿಕೆಟ್‌ಗಳ ಜಯ

ಆಲೂರು 2 ಕ್ರೀಡಾಂಗಣ: ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌: 250. ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ: 83 ಓವರ್‌ಗಳಲ್ಲಿ 5 ವಿಕೆಟ್‌ಗೆ 303 (ದಿಗ್ವಿಜಯ್ ಪಾಟೀಲ 68, ಮಂದಾರ ಭಂಡಾರಿ 60, ಮಿಜಾನ್ ಸಯ್ಯದ್ ಔಟಾಗದೇ 71; ಶ್ರೀಶಾ ಆಚಾರ್‌ 91ಕ್ಕೆ 2. ಫಲಿತಾಂಶ: ಪಂದ್ಯ ಡ್ರಾ.

ಐಎಎಫ್‌ ಕ್ರೀಡಾಂಗಣ: ಛತ್ತೀಸಗಢ ರಾಜ್ಯ ಕ್ರಿಕೆಟ್‌ ಸಂಸ್ಥೆ: 254 ಮತ್ತು 41 ಓವರ್‌ಗಳಲ್ಲಿ 3 ವಿಕೆಟ್‌ಗೆ 121. ಕೆಎಸ್‌ಸಿಎ: 250. ಫಲಿತಾಂಶ: ಪಂದ್ಯ ಡ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.