ADVERTISEMENT

ಐಪಿಎಲ್ 14ನೇ ಆವೃತ್ತಿ: ಕಿಂಗ್ಸ್ ಇಲೆವೆನ್ ಪಂಜಾಬ್ ಈಗ ಪಂಜಾಬ್ ಕಿಂಗ್ಸ್

ಪಿಟಿಐ
Published 15 ಫೆಬ್ರುವರಿ 2021, 17:08 IST
Last Updated 15 ಫೆಬ್ರುವರಿ 2021, 17:08 IST
ಕ್ರಿಸ್ ಗೇಲ್: ಪಿಟಿಐ ಸಂಗ್ರಹ ಚಿತ್ರ
ಕ್ರಿಸ್ ಗೇಲ್: ಪಿಟಿಐ ಸಂಗ್ರಹ ಚಿತ್ರ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪಂಜಾಬ್ ಕಿಂಗ್ಸ್ ಎಂದು ಕರೆಯಲಾಗುತ್ತದೆ, ದೀರ್ಘ ಸಮಾಲೋಚನೆ ಬಳಿಕ ತಂಡದ ಮಾಲೀಕರು ಹೆಸರಿನಲ್ಲಿ ಬದಲಾವಣೆ ಮಾಡಿದ್ದಾರೆ.

ಯುಎಇಯಲ್ಲಿ ನಡೆದ ಟಿ 20 ಐಪಿಎಲ್ ಸರಣಿಯ ಕಳೆದ ಆವೃತ್ತಿಯಲ್ಲಿ ಸ್ಪರ್ಧಿಸಿದ ಎಂಟು ತಂಡಗಳಲ್ಲಿ ಕಿಂಗ್ ಇಲೆವೆನ್ ಪಂಜಾಬ್ ಕೂಡ ಒಂದು.

"ತಂಡವು ದೀರ್ಘಕಾಲದಿಂದ ಹೆಸರು ಬದಲಾಯಿಸಲು ಯೋಜಿಸುತ್ತಿತ್ತು. ಹಾಗಾಗಿ, ಈ ವರ್ಷ ಐಪಿಎಲ್ ಸರಣಿಗೂ ಮೊದಲೇ ಇದನ್ನು ಮಾಡಬೇಕೆಂದು ಯೋಚಿಸಿದೆ. ಆದ್ದರಿಂದ ಇದು ಹಠಾತ್ ನಿರ್ಧಾರವಲ್ಲ" ಎಂದು ಬಿಸಿಸಿಐ ಮೂಲವು ಸೋಮವಾರ ಪಿಟಿಐಗೆ ತಿಳಿಸಿದೆ.

ADVERTISEMENT

2008 ರಲ್ಲಿ ಐಪಿಎಲ್ ಆರಂಭದಿಂದಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಜಿಂಟಾ ಮತ್ತು ಕರಣ್ ಪಾಲ್ ಜಂಟಿ ಒಡೆತನದಲ್ಲಿದೆ.

ಆದರೆ, ಇದುವರೆಗೂ ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಐಪಿಎಲ್ ಪಂದ್ಯಾವಳಿಯ 13 ವರ್ಷಗಳ ಇತಿಹಾಸದಲ್ಲಿ, ಪಂಜಾಬ್ ಒಮ್ಮೆ ರನ್ನರ್-ಅಪ್ ಆಗಿದ್ದರೆ, ಮತ್ತೊಂದು ಬಾರಿ ಮೂರನೇ ಸ್ಥಾನವನ್ನು ಗಳಿಸಿತ್ತು.

ಏಪ್ರಿಲ್ ಎರಡನೇ ವಾರದಲ್ಲಿ ಈ ವರ್ಷದ ಐಪಿಎಲ್ ಸರಣಿ ಪ್ರಾರಂಭವಾಗಲಿದ್ದು, ಗುರುವಾರ ಆಟಗಾರರ ಹರಾಜು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.