ADVERTISEMENT

ಅಭ್ಯಾಸ ಪಂದ್ಯ| ಭಾರತಕ್ಕೆ ಭರತ್ ಆಸರೆ; ಕಣಕ್ಕಿಳಿದ ವಿರಾಟ್

ಲಿಸಿಸ್ಟರ್ ಅಭ್ಯಾಸ ಪಂದ್ಯ; ರೋಮನ್ ವಾಕರ್‌ಗೆ ಐದು ವಿಕೆಟ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 18:44 IST
Last Updated 23 ಜೂನ್ 2022, 18:44 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಗ್ರೇಸ್‌ ರೋಡ್(ಎಎಫ್‌ಪಿ/ರಾಯಿಟರ್ಸ್): ವಿಕೆಟ್‌ಕೀಪರ್–ಬ್ಯಾಟರ್ ಶ್ರೀಕರ್ ಭರತ್ ಇಲ್ಲಿ ಆರಂಭವಾದ ಲೀಸಿಸ್ಟರ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿಯವು ಆತಂಕದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ದಿನದಾಟದ ಅಂತ್ಯಕ್ಕೆ 60.2 ಓವರ್‌ಗಳಲ್ಲಿ 8ಕ್ಕೆ 246 ರನ್‌ ಗಳಿಸಿತು. ಲೀಸಿಸ್ಟರ್ ತಂಡದ ವೇಗಿ ರೋಮನ್ ವಾಕರ್ (24ಕ್ಕೆ5) ನಿಖರ ದಾಳಿಯಿಂದಾಗಿ ತಂಡವು 138 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಭರತ್ (ಬ್ಯಾಟಿಂಗ್ 70; 111ಎ, 4X8, 6X1) ಅರ್ಧಶತಕ ಗಳಿಸಿ ದಿಟ್ಟ ಉತ್ತರ ನೀಡಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಪೂರ್ವಾಭ್ಯಾಸಕ್ಕಾಗಿ ನಾಲ್ಕು ದಿನಗಳ ಪಂದ್ಯ ಆಯೋಜಿಸಲಾಗಿದೆ.ಭಾರತದ ವಿಕೆಟ್‌ಕೀಪರ್ ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಈ ಪಂದ್ಯದಲ್ಲಿ ಲೀಸಿಸ್ಟರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡಿಗ ಪ್ರಸಿದ್ಧ ಬೌಲಿಂಗ್‌ನಲ್ಲಿ ರಿಷಬ್ ಪಂತ್ ಪಡೆದ ಕ್ಯಾಚ್‌ಗೆ ಶ್ರೇಯಸ್ ಅಯ್ಯರ್ ಔಟಾದರು. ಅವರು 11 ಎಸೆತ ಎದುರಿಸಿಯೂ ಖಾತೆ ತೆರೆಯಲಿಲ್ಲ.

ADVERTISEMENT

ಕೋವಿಡ್‌ನಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ (33; 69ಎ, 4X4, 6X1) ಆರಂಭದಲ್ಲಿ ಉತ್ತಮವಾಗಿ ಆಡಿದರು. ಆದರೆ ದೀರ್ಘ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರು: 60.2 ಓವರ್‌ಗಳಲ್ಲಿ 8ಕ್ಕೆ246 (ರೋಹಿತ್ ಶರ್ಮಾ 25, ಶುಭಮನ್ ಗಿಲ್ 21, ವಿರಾಟ್ ಕೊಹ್ಲಿ 33, ಶ್ರೀಕರ್ ಭರತ್ ಬ್ಯಾಟಿಂಗ್ 70,ಉಮೇಶ್ ಯಾದವ್ 23, ಮೊಹಮ್ಮದ್ ಶಮಿ ಬ್ಯಾಟಿಂಗ್ 18, ವಿಲ್ ಡೇವಿಸ್ 64ಕ್ಕೆ2, ರೋಮನ್ ವಾಕರ್ 24ಕ್ಕೆ5, ಪ್ರಸಿದ್ಧ ಕೃಷ್ಣ 37ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.