ADVERTISEMENT

ಎಲ್‌ಪಿಎಲ್ ಉದ್ಘಾಟನೆಗೆ ತಂತ್ರಜ್ಞಾನದ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 17:30 IST
Last Updated 25 ನವೆಂಬರ್ 2020, 17:30 IST
ಲಂಕಾ ಪ್ರೀಮಿಯರ್ ಲೀಗ್‌
ಲಂಕಾ ಪ್ರೀಮಿಯರ್ ಲೀಗ್‌   

ಬೆಂಗಳೂರು: ಬಹುನಿರೀಕ್ಷಿತ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್‌) ಟಿ20 ಕ್ರಿಕೆಟ್ ಟೂರ್ನಿಗೆ ಗುರುವಾರ ಕೊಲಂಬೊದಲ್ಲಿ ಚಾಲನೆ ಸಿಗಲಿದ್ದು ವರ್ಚುವಲ್ ಆಗಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ತಂತ್ರಜ್ಞಾನದ ಲೋಕ ಅನಾವರಣಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಕಾಲಮಾನ ಸಂಜೆ 6.50ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು ಶ್ರೀಲಂಕಾದ ಸಂಸ್ಕೃತಿ, ಪರಂಪರೆಯನ್ನು ಒಳಗೊಂಡ ಕಾರ್ಯಕ್ರಮಗಳು ಮನರಂಜಿಸಲು ಸಜ್ಜಾಗಿವೆ ಎಂದು ತಿಳಿಸಲಾಗಿದೆ.

ಐದು ತಂಡಗಳು ಪಾಲ್ಗೊಳ್ಳುವ ಲೀಗ್‌ನಲ್ಲಿ ಒಟ್ಟು 23 ಪಂದ್ಯಗಳು ಇರುತ್ತವೆ. ಹೊಂಬಂಟೊಟದ ಎಂಆರ್‌ಐಸಿಎಸ್‌ನಲ್ಲಿ 15 ದಿನ ಪಂದ್ಯಗಳು ನಡೆಯಲಿವೆ. ಏಂಜೆಲೊ ಮ್ಯಾಥ್ಯೂಸ್ ನಾಯಕತ್ವದ ಕೊಲಂಬೊ ಕಿಂಗ್ಸ್ ಮತ್ತು ಕುಶಾಲ್ ಪೆರೇರಾ ನೇತೃತ್ವದ ಕ್ಯಾಂಡಿ ಟಸ್ಕರ್ಸ್‌ ನಡುವೆ ಉದ್ಘಾಟನಾ ಪಂದ್ಯ ರಾತ್ರಿ ಎಂಟು ಗಂಟೆಗೆ ಆರಂಭಗೊಳ್ಳಲಿದೆ.

ADVERTISEMENT

ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು ಎಂಟು ಪಂದ್ಯಗಳನ್ನು ಅಡಲಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಈ ಪಂದ್ಯಗಳು ಡಿಸೆಂಬರ್ 13 ಮತ್ತು 14ರಂದು ನಡೆಯಲಿದ್ದು 16ರಂದು ಫೈನಲ್ ಹಣಾಹಣಿ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.