ADVERTISEMENT

ಐಪಿಎಲ್: ಕೈಲ್ ಮೇಯರ್ಸ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:30 IST
Last Updated 2 ಏಪ್ರಿಲ್ 2023, 6:30 IST
ಕೈಲ್ ಮೇಯರ್ಸ್ ಬ್ಯಾಟಿಂಗ್ ಸೊಬಗು  –ಪಿಟಿಐ ಚತ್ರ
ಕೈಲ್ ಮೇಯರ್ಸ್ ಬ್ಯಾಟಿಂಗ್ ಸೊಬಗು  –ಪಿಟಿಐ ಚತ್ರ   

ಲಖನೌ(ಪಿಟಿಐ): ಕೈಲ್ ಮೇಯರ್ಸ್ ಅರ್ಧಶತಕದ ಬಲದಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸವಾಲಿನ ಮೊತ್ತ ಪೇರಿಸಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೇಯರ್ಸ್ 38 ಎಸೆತಗಳಲ್ಲಿ 73 ರನ್ ಗಳಿಸಿದರು. ಇದರಿಂದಾಗಿ ಲಖನೌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 193 ರನ್ ಗಳಿಸಿತು.

ಲಖನೌ ತಂಡದ ನಾಯಕ ಕೆ.ಎಲ್. ರಾಹುಲ್ ಅವರೊಂದಿಗೆ ಕೈಲ್ ಇನಿಂಗ್ಸ್ ಅರಂಭಿಸಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಚೇತನ್ ಸಕಾರಿಯಾ ಎಸೆತದಲ್ಲಿ ರಾಹುಲ್ ಔಟಾದರು. ಕೇವಲ ಎಂಟು ರನ್ ಗಳಿಸಿದರು.

ADVERTISEMENT

ಈ ಹಂತದಲ್ಲಿ ಮೇಯರ್ಸ್ ಜೊತೆಗೂಡಿದ ದೀಪಕ್ ಹೂಡಾ (17 ರನ್) ಇನಿಂಗ್ಸ್‌ಗೆ ಬಲ ತುಂಬುವಲ್ಲಿ ಸಹಕರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಸೇರಿಸಿದರು. ಅದರಲ್ಲಿ ಮೇಯರ್ಸ್ ಅಬ್ಬರವೇ ಜೋರಾಗಿತ್ತು. ಅವರು ಒಟ್ಟು ಏಳು ಸಿಕ್ಸರ್ ಸಿಡಿಸಿದರು.

ಕೊನೆಯ ಹಂತದ ಓವರ್‌ಗಳಲ್ಲಿ ನಿಕೊಲಸ್ ಪೂರನ್ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರು ಮೂರು ಸಿಕ್ಸರ್ ಹೊಡೆದರು. ಮಾರ್ಕಸ್ ಸ್ಟೊಯಿನಿಸ್ (12) ಮತ್ತು ಆಯುಷ್ ಬದೋನಿ (18) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್ ಜೈಂಟ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 183 (ಕೈಲ್ ಮೇಯರ್ಸ್ 73, ದೀಪಕ್ ಹೂಡಾ 17, ಕೃಣಾಲ್ ಪಾಂಡ್ಯ ಔಟಾಗದೆ 15, ಮಾರ್ಕಸ್ ಸ್ಟೊಯಿನಿಸ್ 12, ನಿಕೊಲಸ್ ಪೂರನ್ 36, ಖಲೀಲ್ ಅಹಮದ್ 30ಕ್ಕೆ2, ಚೇತನ ಸಕಾರಿಯಾ 53ಕ್ಕೆ2) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.