ADVERTISEMENT

ಕ್ರಿಕೆಟ್‌: ರಕ್ಷಿತ್‌, ಶರತ್‌, ರಮಣ ಶತಕಗಳ ಮಿಂಚು

ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 20:12 IST
Last Updated 13 ನವೆಂಬರ್ 2018, 20:12 IST

ಬೆಂಗಳೂರು: ರಕ್ಷಿತ್‌ (109 ರನ್‌), ರಮಣ ಮೂರ್ತಿ (ಔಟಾಗದೆ 131) ಮತ್ತು ಟಿ.ಎಸ್‌.ಶರತ್‌ (124ರನ್‌) ಅವರ ಮನಮೋಹಕ ಶತಕಗಳ ನೆರವಿನಿಂದ ಜಯನಗರ ಕ್ರಿಕೆಟರ್ಸ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಯುನೈಟೆಡ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ 359 ರನ್‌ಗಳ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಜಯನಗರ ಕ್ರಿಕೆಟರ್ಸ್‌: 45 ಓವರ್‌ಗಳಲ್ಲಿ 7 ವಿಕೆಟ್‌ಗೆ 469 (ರಕ್ಷಿತ್‌ 109, ಟಿ.ಎಸ್‌.ಶರತ್‌ 124; ರಮಣ ಮೂರ್ತಿ ಔಟಾಗದೆ 131; ದಿನೇಶ್‌ 65ಕ್ಕೆ3).

ಯುನೈಟೆಡ್‌ ಕ್ಲಬ್‌: 30 ಓವರ್‌ಗಳಲ್ಲಿ 110 (ಅನೂಪ್‌ ಸಿಂಗ್‌ 41ಕ್ಕೆ3). ಫಲಿತಾಂಶ: ಜಯನಗರ ಕ್ರಿಕೆಟರ್ಸ್‌ಗೆ 359ರನ್‌ ಗೆಲುವು.

ADVERTISEMENT

ಆನೇಕಲ್‌ ಟೌನ್‌ ಕ್ಲಬ್‌: 49.3 ಓವರ್‌ಗಳಲ್ಲಿ 249 (ಹೇಮಂತ್‌ 65, ರಾಕೇಶ್‌ 23ಕ್ಕೆ2). ಕರ್ನಾಟಕ ಯೂತ್‌ ಕ್ರಿಕೆಟ್‌ ಸಂಸ್ಥೆ, ಮಾಲೂರು: 33.1 ಓವರ್‌ಗಳಲ್ಲಿ 106 (ಹೇಮಂತ್‌ 32ಕ್ಕೆ3). ಫಲಿತಾಂಶ: ಆನೇಕಲ್‌ ಟೌನ್‌ ತಂಡಕ್ಕೆ 143ರನ್‌ ಗೆಲುವು.

ಸ್ಪಾರ್ಕ್‌ಲರ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 360 (ಎಫ್.ಜಾರ್ಜ್‌ 67, ಕೆ.ಮುಕುಲ್‌ 86, ಸುಂದರಮೂರ್ತಿ ರಾಜ್‌ 55; ಎ.ಪವನ್‌ ಕುಮಾರ್ 70ಕ್ಕೆ4). ಎಸ್‌.ಜೆ. ಪಾಲಿಟೆಕ್ನಿಕ್‌: 26.4 ಓವರ್‌ಗಳಲ್ಲಿ 98 (ವಿಶಾಲ್‌ ಒನಾತ್‌ 21ಕ್ಕೆ5, ಸಚಿನ್‌ 12ಕ್ಕೆ2). ಫಲಿತಾಂಶ: ಸ್ಪಾರ್ಕ್‌ಲರ್ಸ್‌ ಕ್ಲಬ್‌ಗೆ 262ರನ್‌ ಜಯ.

ಬೌಲರ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 (ವಿಶ್ವಜಿತ್‌ 71, ಸಿದ್ದೇಶ್ ಔಟಾಗದೆ 115; ಗಿರೀಶ್‌ 36ಕ್ಕೆ4). ಸೂಪರ್‌ ಕ್ಲಬ್‌: 50 ಓವರ್‌ಗಳಲ್ಲಿ 243 (ಅನೀಶ್‌ 51, ಚೇತನ್‌ 51; ರೋಹಿತ್‌ 37ಕ್ಕೆ3, ಗಗನ್‌ ಸಿಂಹ 25ಕ್ಕೆ3, ಜಿ.ವಿನಯ್‌ ಕುಮಾರ್‌ 64ಕ್ಕೆ4). ಫಲಿತಾಂಶ: ಬೌಲರ್ಸ್‌ ಕ್ಲಬ್‌ಗೆ 8ರನ್‌ ಗೆಲುವು.

ಯಂಗ್‌ ಬಾಯ್ಸ್‌ ಕ್ರಿಕೆಟ್‌ ಸಂಸ್ಥೆ: 46.5 ಓವರ್‌ಗಳಲ್ಲಿ 255 (ಪಿ.ಪರಕ್ಷಿತ್‌ 48; ಎಸ್‌.ಚಂದ್ರ 40ಕ್ಕೆ3, ಸುಪ್ರಿತ್‌ 39ಕ್ಕೆ2). ಓರಿಯೆಂಟಲ್‌ ಕ್ಲಬ್‌: 39 ಓವರ್‌ಗಳಲ್ಲಿ 3 ವಿಕೆಟ್‌ಗೆ 259 (ಎಸ್‌.ಚಂದ್ರ 62, ಕಿಶೋರ್‌ 80). ಫಲಿತಾಂಶ: ಓರಿಯೆಂಟಲ್‌ ಕ್ಲಬ್‌ಗೆ 7 ವಿಕೆಟ್‌ ಜಯ.

ಯೂನಿಕ್‌ ಕ್ಲಬ್‌: 45.4 ಓವರ್‌ಗಳಲ್ಲಿ 225 (ಕಿಶನ್‌ ಜೈಸ್ವಾಲ್‌ 108; ಎಂ.ಯಶಸ್‌ 12ಕ್ಕೆ2). ನ್ಯಾಷನಲ್‌ ಕ್ರಿಕೆಟರ್ಸ್‌: 43.1 ಓವರ್‌ಗಳಲ್ಲಿ 5 ವಿಕೆಟ್‌ಗೆ 229 (ಯಶಸ್‌ ಔಟಾಗದೆ 85, ಮಯೂರ್‌ 64; ರಾಘವೇಂದ್ರ 42ಕ್ಕೆ3). ಫಲಿತಾಂಶ: ನ್ಯಾಷನಲ್‌ ಕ್ರಿಕೆಟರ್ಸ್‌ಗೆ 5 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.