ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಲಖನೌ: ಭಾರತ ಎ ತಂಡದ ಎಡಗೈ ಸ್ಪಿನ್ನರ್ ಮಾನವ್ ಸುತಾರ್ (28–4–93–5) ಅವರು ಐದು ವಿಕೆಟ್‌ಗಳ ಗೊಂಚಲು ಪಡೆದು ಆಸ್ಟ್ರೇಲಿಯಾ ‘ಎ’ ತಂಡ ಮಂಗಳವಾರ ಆರಂಭವಾದ ಎರಡನೇ ಕ್ರಿಕೆಟ್ ‘ಟೆಸ್ಟ್’ ಪಂದ್ಯದಲ್ಲಿ ಗಮನ ಸೆಳೆದರು. ನಾಲ್ಕು ದಿನಗಳ ಪಂದ್ಯದ ಮೊದಲ ದಿನದಾಟ ಮುಗಿದಾಗ ಪ್ರವಾಸಿ ತಂಡ 9 ವಿಕೆಟ್‌ಗೆ 350 ರನ್ ಗಳಿಸಿತ್ತು.
ಮಾನವ್ ಅವರ ಉತ್ತಮ ಬೌಲಿಂಗ್ ಹೊರತಾಗಿಯೂ ಟೆಸ್ಟ್ ಆಟಗಾರ ನಥಾನ್ ಮೆಕ್‌ಸ್ವೀನಿ (74, 162ಎ, 4x10) ಮತ್ತು ಜಾಕ್ ಎಡ್ವರ್ಡ್ಸ್ (88, 78ಎ, 4x11, 6x1) ಅವರು ಪ್ರವಾಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು. ಕೊನೆಯ ಅವಧಿಯಲ್ಲಿ ಎಡ್ವರ್ಡ್ಸ್ ಮತ್ತು ಟಾಡ್ ಮರ್ಫಿ (ಅಜೇಯ 29, 45ಎ, 4x5) ಅವರು ಎಂಟನೇ ವಿಕೆಟ್‌ಗೆ 55 ರನ್ ಸೇರಿಸಿದರು.
ಶ್ರೇಯಸ್ ಅಯ್ಯರ್ ಈ ಪಂದ್ಯದಿಂದ ಹಿಂದೆಸರಿದ ಕಾರಣ ಧ್ರುವ್ ಜುರೇಲ್ ಭಾರತ ಎ ತಂಡದ ನಾಯಕತ್ವ ವಹಿಸಿದರು. ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು ಎರಡು ಟೆಸ್ಟ್‌ಗಳಿಗೆ ಸಜ್ಜಾಗಲು ವೇಗಿ ಮೊಹಮದ್ ಸಿರಾಜ್ ಮತ್ತು ಬ್ಯಾಟರ್ ಕೆ.ಎಲ್.ರಾಹುಲ್ ಅವರು ಇಲ್ಲಿ ಕಣಕ್ಕಿಳಿದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ಎ: 84 ಓವರುಗಳಲ್ಲಿ 9 ವಿಕೆಟ್‌ಗೆ 350 (ಸ್ಯಾಮ್ ಕೊನ್ಸ್ಟಾಸ್ 49, ನಥಾನ್ ಮೆಕ್‌ಸ್ವೀನಿ 74, ಒಲಿವರ್ ಪೀಕ್ 29, ಜೋಶ್ ಫಿಲಿಪ್ 39, ಜಾಕ್ ಎಡ್ವರ್ಡ್ಸ್ 88, ಟಾಡ್ ಮರ್ಫಿ ಔಟಾಗದೇ 29; ಮೊಹಮ್ಮದ್ ಸಿರಾಜ್ 73ಕ್ಕೆ1, ಪ್ರಸಿದ್ಧ ಕೃಷ್ಣ 63ಕ್ಕೆ1, ಗುರ್ನೂರ್ ಬ್ರಾರ್ 71ಕ್ಕೆ2, ಮಾನವ್ ಸುತಾರ್ 93ಕ್ಕೆ5)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.