ಮುಂಬೈ (ಪಿಟಿಐ): ಮುಂಬೈ ಸೌತ್ ಸೆಂಟ್ರಲ್ ಮರಾಠ ರಾಯಲ್ಸ್ ತಂಡವು ಮುಂಬೈ ಟಿ20 ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಸೊಬೊ ಮುಂಬೈ ಫಾಲ್ಕನ್ಸ್ ತಂಡವು ರನ್ನರ್ಸ್ ಅಪ್ ಆಗಿದೆ.
ಗುರುವಾರ ರಾತ್ತಿ ಮುಗಿದ ಫೈನಲ್‌ನಲ್ಲಿ ಮರಾಠ ತಂಡವು 5 ವಿಕೆಟ್‌ಗಳಿಂದ ಜಯಿಸಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮರಾಠ ರಾಯಲ್ಸ್ ತಂಡವು ಮುಂಬೈ ಫಾಲ್ಕನ್ಸ್ ತಂಡವನ್ನು 157 ರನ್‌ಗಳಿಗೆ ನಿಯಂತ್ರಿಸಿತು. ಶ್ರೇಯಸ್ ಅಯ್ಯರ್ ಅವರು ಕೇವಲ 12 ರನ್ ಗಳಿಸಿ, ಮುಂಬೈ ಫಾಲ್ಕನ್ಸ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದರು.
ಗುರಿ ಬೆನ್ನಟ್ಟಿದ ಮರಾಠ ರಾಯಲ್ಸ್ ತಂಡವು ಚಿನ್ಮಯ್ ಸುತಾರ್ ಅವರ ಅರ್ಧಶತಕದ (49 ಎಸೆತಗಳಲ್ಲಿ 53) ನೆರವಿನಿಂದ 19.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 158 ರನ್ ಗಳಿಸಿ ಗೆದ್ದಿತು. ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು, ಈಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯ ಫೈನಲ್‌ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಮುಗ್ಗರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.